ಹಾಸನ: ಕೆಂಪೇಗೌಡ ಪ್ರತಿಮೆ ಪಕ್ಕದಲ್ಲಿ ಅಂಬೇಡ್ಕರ್ ಟ್ರಸ್ಟ್ ನಾಮಫಲಕ ಅಳವಡಿಕೆ – ಗ್ರಾಮಸ್ಥರ ನಡುವೆ ತೀವ್ರ ವಾಗ್ವಾದ

An incident that caused tension in the village for some time took place on Sunday night when a nameplate with the name of Ambedkar Trust was installed next to the Kempegowda statue in Bandishettihalli village of Holenarasipur taluk.

ಹಾಸನ: ಹೊಳೆನರಸೀಪುರ  ತಾಲ್ಲೂಕಿನ ಬಂಡಿಶೆಟ್ಟಿಹಳ್ಳಿ ಗ್ರಾಮದಲ್ಲಿ ಕೆಂಪೇಗೌಡ ಪ್ರತಿಮೆ ಪಕ್ಕದಲ್ಲೇ ಅಂಬೇಡ್ಕರ್ ಟ್ರಸ್ಟ್ ಹೆಸರಿನ ನಾಮಫಲಕವನ್ನು ಅಳವಡಿಸಿದ್ದು ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನತೆಯನ್ನುಂಟುಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಗ್ರಾಮದ ಸರ್ಕಲ್‌ನಲ್ಲಿ  ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಇದೇ ಸ್ಥಳದಲ್ಲಿ ಭಾನುವಾರ ದಿಢೀರ್ ಅಂಬೇಡ್ಕರ್ ಟ್ರಸ್ಟ್ ನಾಮಫಲಕ ಅಳವಡಿಕೆ ನಡೆದಿದೆ.

ಈ ನಾಮಫಲಕಕ್ಕಾಗಿ ಯಾವುದೇ ಅಧಿಕೃತ ಅನುಮತಿ ಪಡೆಯಲಾಗಿಲ್ಲ ಎಂಬುದು ಕೆಲವು ಗ್ರಾಮಸ್ಥರ ಆರೋಪವಾಗಿದ್ದು, ನಾಮಫಲ ಅಳವಡಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ವಾಗ್ವಾದ ಕ್ಷಣಿಕ ಉದ್ವಿಗ್ನತೆಯನ್ನು ಸೃಷ್ಟಿಸಿತು.

ಘಟನೆಯ ಮಾಹಿತಿ ತಿಳಿದ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಣ್ಣಗಾಗಿಸಿದರು.