ಅರಕಲಗೂಡು: ಜಾತಿ ನಿಂದನೆ ಹಾಗೂ ಬೆದರಿಕೆ ಆರೋಪ: ಅರಕಲಗೂಡು ತಹಶೀಲ್ದಾರ್ ಕಚೇರಿ ಸಿಬ್ಬಂದಿ ಆಡಿಯೋ ವೈರಲ್

An audio clip of Ujwal, a Second Grade Assistant (SDA) at the Arakalgud Taluk Office, allegedly being abused and threatened in the name of caste has gone viral on social media.

ಅರಕಲಗೂಡು: ಅರಕಲಗೂಡು ತಾಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (SDA) ಆಗಿರುವ ಉಜ್ವಲ್ ಅವರಿಗೆ ಜಾತಿ ಹೆಸರಿನಲ್ಲಿ ನಿಂದನೆ ಮತ್ತು ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಿರಸ್ತೆದಾರ್ ಸ್ವಾಮಿ ಅವರ ಮಕ್ಕಳ ಸ್ನೇಹಿತನೊಬ್ಬ ಉಜ್ವಲ್ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತೇನೆ” ಎಂದು ಬೆದರಿಕೆ ಹಾಕಿರುವುದು ಆಡಿಯೋದಲ್ಲಿ ಕೇಳಿಬಂದಿದೆ.

ಈ ಹಿಂದೆ ನಡೆದ ಪೂರ್ವಭಾವಿ ಸಭೆಯೊಂದರಲ್ಲಿ ಶಿರಸ್ತೆದಾರ್ ಸ್ವಾಮಿ ಅವರು ಉಜ್ವಲ್ ಅವರ ನಡುವೆ ಜಾತಿ ಹೆಸರಿನಲ್ಲಿ ಸಂಘರ್ಷ ಉಂಟಾಗಿತ್ತು.

ಈ ಸಂಬಂಧ ಉಜ್ವಲ್ ಅವರು ತಹಶೀಲ್ದಾರ್ ಸೌಮ್ಯ ಅವರಿಗೆ ಲಿಖಿತ ದೂರು ನೀಡಿದ್ದರು. ದೂರಿನ ಅನ್ವಯ ತಹಶೀಲ್ದಾರ್ ಅವರು ಶಿರಸ್ತೆದಾರ್ ಸ್ವಾಮಿ ಅವರಿಗೆ ನೋಟೀಸ್ ಜಾರಿ ಮಾಡಿದ್ದರು ಎಂದು ತಿಳಿದು ಬಂದಿದೆ.

ನೋಟೀಸ್ ವಿಚಾರವನ್ನು ತಮ್ಮ ಮಕ್ಕಳಿಗೆ ತಿಳಿಸಿದ ಬಳಿಕ, ಅವರ ಸ್ನೇಹಿತರ ಮೂಲಕ ಉಜ್ವಲ್ ಅವರಿಗೆ ಕರೆ ಮಾಡಿಸಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಉಜ್ವಲ್ ಮೂಲತಃ ಹೊಳೆನರಸೀಪುರ ತಾಲ್ಲೂಕಿನವರಾಗಿದ್ದು, ಅಲ್ಲಿಗೆ ಬಂದರೆ ಹಲ್ಲೆ ಮಾಡಿಸುವುದಾಗಿ ಕೂಡ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.

ಈ ಅಧಿಕಾರಿ ಸಂಬಂಧಿ ಮತ್ತು ನೌಕರರ ನಡುವೆ ನಡೆದ ಸಂಭಾಷಣೆಯ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

An audio clip of Ujwal, a Second Grade Assistant (SDA) at the Arakalgud Taluk Office, allegedly being abused and threatened in the name of caste has gone viral on social media.