ಹೊಳೆನರಸೀಪುರದಲ್ಲಿ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವಕ್ಕೆ ಭವ್ಯ ಚಾಲನೆ ಕಲೆಯ ಮಹತ್ವ ಕುರಿತು ಜಾಗೃತಿ ಹೆಮ್ಮೆಯ ವಿಷಯ – ಸಂಸದ ಶ್ರೇಯಸ್ ಎಂ. ಪಟೇಲ್

Alva's Nudi Sri is from the Cultural Glory Foundation of Moodbidri. It is a matter of pride that he has taken a bold step in creating awareness about the importance of art by taking steps to spread cultural greatness across the country.

ಹೊಳೆನರಸೀಪುರ: ಮೂಡಬಿದರೆಯ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವ ಪ್ರತಿಷ್ಠಾನದವರು. ದೇಶದೆಲ್ಲೆಡೆ ಸಾಂಸ್ಕೃತಿಕ ಹಿರಿಮೆಯನ್ನು ಸಾರುವ ನಿಟ್ಟಿನಲ್ಲಿ ಹೆಜ್ಜೆ ಇಡುವುದರ ಮೂಲಕ ಕಲೆಯ ಮಹತ್ವ ಕುರಿತು ಜಾಗೃತಿ ಮೂಡಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ವಿಷಯ ಎಂದು ಹಾಸನ ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ .ಪಟೇಲ್ ತಿಳಿಸಿದರು.

ಅವರು ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಸಂಸದರ ಸಾರಥ್ಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷವನ್ನು ಉಂಟುಮಾಡಿಕೊಳ್ಳಬೇಕು. ಆಗ ಮಾತ್ರ ಶೈಕ್ಷಣಿಕ ಕ್ಷೇತ್ರದ ಪ್ರಗತಿಯ ಜೊತೆಗೆ ಸಾಂಸ್ಕೃತಿಕ ಜಗತ್ತಿನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವದಂತಾಗುತ್ತದೆ. ತಮ್ಮ ಪ್ರತಿಭೆಯನ್ನು ನೋಡಿ ಆನಂದಿಸುವ ಪ್ರೇಕ್ಷಕರು ತಮಗೆ ಆಶೀರ್ವಾದ ಮಾಡುವುದೇ ತಮ್ಮ ನೆಮ್ಮದಿ ಬದುಕಿಗೆ ಶ್ರೀರಕ್ಷೆಯಾಗಲಿದೆ ಎಂದು ನುಡಿದರು.

ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ಆಳ್ವ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಳೆನರಸೀಪುರ ತಾಲೂಕಿನಲ್ಲಿ ನಮ್ಮ ಸಂಸ್ಥೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲು ಹಲವಾರು ವರ್ಷಗಳಿಂದಲೂ ಪ್ರಯತ್ನ ಮಾಡಿ ವಿಫಲವಾಗಿದ್ದವು. ಅಂತಹ ಒಂದು ಅವಕಾಶವನ್ನು ಒದಗಿಸಿ ಕೊಟ್ಟಿರುವ ಸಂಸದರಾದ ಶ್ರೇಯಸ್ ಎಂ .ಪಟೇಲ್ ಸಹಕಾರಕ್ಕೆ ನಮ್ಮ ಸಂಸ್ಥೆ ಸದಾ ಋಣಿಯಾಗಿರುತ್ತದೆ. ಸಂಸದರು ಅವರು ಆಯ್ಕೆಯಾದ ದಿನದಿಂದ ಈವರೆಗೂ ಸಂಸತ್ ಅಧಿವೇಶನದಲ್ಲಿ ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸೇರಿದಂತೆ ಹಲವು ಗುರುತರ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಸಂಬಂಧ ಪಟ್ಟವರ ಗಮನ ಸೆಳೆಯುವುದರ ಮೂಲಕ ಇತರೆ ಜನಪ್ರತಿನಿಧಿಗಳಿಗೆ ಮಾದರಿಯಾಗಿರುವುದು ನಮ್ಮೆಲ್ಲರಿಗೂ ಸಂತೋಷ ಉಂಟು ಮಾಡುವ ವಿಷಯ.

ಇಂತಹ ಸಂಸದರನ್ನು ತಾವು ಮತ್ತು ನಾವುಗಳು ಪಡೆದಿರುವುದು ನಮ್ಮ ಪುಣ್ಯ. ಸರಳ, ಸಜ್ಜನಿಕೆ, ಉದಾರತೆ ಮನಸ್ಸುಳ್ಳ ಯುವ ಸಂಸದರಿಗೆ ತಮ್ಮ ಆಶೀರ್ವಾದ ಸದಾ ಇರಲಿ ಎಂಬುದೇ ನಮ್ಮ ಮಹಾಬಯಕೆ ಎಂದರು. ಸುಮಾರು 350ಕ್ಕೂ ನಮ್ಮ ರಾಜ್ಯ ಸೇರಿದಂತೆ ಪಕ್ಕದ ರಾಜ್ಯಗಳ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದು ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ತಾವು ಪಾಲ್ಗೊಳ್ಳುವುದರ ಮೂಲಕ ಸಾಂಸ್ಕೃತಿಕ ವೈಭವದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಮೈ ನಡುಗಿಸುವ ಕೊರೆಯುವ ಚಳಿಯ ನಡುವೆ ಸಂಘ ಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮಾಧ್ಯಮದವರು ಸೇರಿದಂತೆ ಸುಮಾರು 8 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಪಾಲ್ಗೊಂಡು ಪ್ರತಿಭೆಗಳ ನೃತ್ಯವನ್ನು ನೋಡಿ ಆನಂದಿಸಿದರು. ಇಂತಹ ಅದ್ಭುತ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯಲು ಅವಕಾಶ ಮಾಡಿಕೊಡುವುದರ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡಿದ ಸಂಸದರಾದ ಶ್ರೇಯಸ್ ಎಂ .ಪಟೇಲ್ ಅವರ ನಡೆ ಕುರಿತು ಸಾವಿರಾರು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯ ಪ್ರಸನ್ನ ಕುಮಾರ್ ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ .ಲಕ್ಷ್ಮಣ ಸ್ವಾಗತಿಸಿದರು.

Alva’s Nudi Sri is from the Cultural Glory Foundation of Moodbidri. It is a matter of pride that he has taken a bold step in creating awareness about the importance of art by taking steps to spread cultural greatness across the country.