ಆಲೂರು : ಲಾರ್ಡ್ ಬೇಡನ್ ಪೊವೆಲ್ ಅವರ ದೂರದೃಷ್ಠಿಯಿಂದ ಸ್ಥಾಪಿತವಾದ ಸ್ಕೌಟ್ಸ್ ಗೈಡ್ಸ್ ಚಳವಳಿ ಮಕ್ಕಳಲ್ಲಿ ಅಮೂಲ್ಯ ಸಂಸ್ಕಾರಯುತ ಮೌಲ್ಯಗಳನ್ನು ಬಿತ್ತುವುದರ ಮೂಲಕ್ಯುತ್ತಮ ಪ್ರಜೆಗಳನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಆಲೂರು ಸ್ಥಳೀಯ ಸಂಸ್ಥೆಯ ತಾಲ್ಲೂಕು ಉಪಾಧ್ಯಕ್ಷೆ ಸಿ. ಎಸ್. ಪೂರ್ಣಿಮಾ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಪಟ್ಟಣದ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ಕಾರ್ಫ್ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿವರ್ಷ ಆಗಸ್ಟ್ ೦೧ ರಂದು ವಿಶ್ವ ಸ್ಕಾರ್ಫ್ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಸಂಸ್ಥೆಯ ಧ್ಯೇಯ, ಉದ್ದೇಶ ಹಾಗೂ ಮಹತ್ವಗಳನ್ನು ಸಮಾಜಕ್ಕೆ ತಿಳಿಸುವುದರ ಮೂಲಕ ಸಂಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು, ಹಿರಿಯ ನಾಗರಿಕರು, ಸಮಾಜ ಸೇವಕರು ಹಾಗೂ ಸಮುದಾಯವನ್ನು ನಮ್ಮ ಸಂಸ್ಥೆ ಕಡೆಗೆ ಸೆಳೆಯುವ ಸ್ಕಾರ್ಫ್ ಧಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾವು ಧರಿಸುವ ಕಂಠವಸ್ತ್ರ ದ ಬಹು ಉಪಯೋಗಗಳನ್ನು ಮಕ್ಕಳಿಗೆ ಹಾಗೂ ಸಮುದಾಯಕ್ಕೆ ತಿಳಿಸಬೇಕಿದೆ. ಕಂಠವಸ್ತ್ರ ಹಾಗೂ ವೋಗಲ್ ಧರಿಸಿದರೆ ಸಾಕು ಅವರು ಸ್ಕೌಟ್ ಗೈಡ್ ಸಂಸ್ಥೆಯ ಸದಸ್ಯ ಎಂದು ಅರ್ಥವಾಗುತ್ತದೆ. ಒಮ್ಮೆ ಸ್ಕೌಟ್ ಆದರೆ ಜೀವನಪೂರ್ತಿ ಸ್ಕೌಟ್ ಎನ್ನುವ ಸಾರ ಅದ್ಭುತವಾದದ್ದು. ನಿವೃತ್ತ ಯೋಧರಾದ ಲಾರ್ಡ್ ಬೇಡನ್ ಪೊವೆಲ್ ೧೯೦೭ ರಲ್ಲಿ ಇಂಗ್ಲೆಂಡಿನ ಬ್ರೌನ್ಸಿ ದ್ವೀಪ ಎಂಬಲ್ಲಿ ಪ್ರಥಮ ಶಿಬಿರವನ್ನು ಮಾಡುತ್ತಾರೆ. ಮೊದಮೊದಲು ಕಂಠವಸ್ತ್ರ ವೇ ಪ್ರಧಾನವಾಗಿತ್ತು, ತದನಂತರ ದೇಶ, ಸ್ಥಳೀಯತೆ ಆದರಿಸಿ ಸಮವಸ್ತ್ರ ರೂಪುರೇಷೆಯಾಯಿತು ಎಂದರು.
ಈ ಸಂದರ್ಭದಲ್ಲಿ ಕಬ್ ಮಾಸ್ಟರ್ ರಾಮಚಂದ್ರ, ಲೇಡಿ ಸ್ಕೌಟ್ ಮಾಸ್ಟರ್ ಶಕುಂತಲಾ & ರೋಹಿಣಿ ಹಾಗೂ ಗೈಡ್ ಕ್ಯಾಪ್ಟನ್ಸ್ಗಳಾದ ರೂಹಿ, ಭವ್ಯ & ಜ್ಯೋತಿ ಸೇರಿದಂತೆ ಎಂಭತ್ತ್ತಕ್ಕೂ ಹೆಚ್ಚು ಸ್ಕೌಟ್ಸ್ ಗೈಡ್ಸ್ ಮಕ್ಕಳು ಹಾಜರಿದ್ದರು.










