4.2 C
Munich
Home News ಹಾಸನದಲ್ಲೇ ಹುಟ್ಟಿದ ಕಥೆಗಳು ಸಿನಿಮಾ ಆಗಿ ಆ. 22 ರಂದು ಲವ್ ಮ್ಯಾಟ್ರು ಹೆಸರಲ್ಲಿ ರಾಜ್ಯಾದ್ಯಂತ...

ಹಾಸನದಲ್ಲೇ ಹುಟ್ಟಿದ ಕಥೆಗಳು ಸಿನಿಮಾ ಆಗಿ ಆ. 22 ರಂದು ಲವ್ ಮ್ಯಾಟ್ರು ಹೆಸರಲ್ಲಿ ರಾಜ್ಯಾದ್ಯಂತ ತೆರೆಗೆ

ಹಾಸನ: ಕಾಲೇಜು ದಿನಗಳಲ್ಲಿ ಬರೆದ ಕಥೆಗಳು ಸಿನಿಮಾ ಆಗಿ ರೂಪು ಪಡೆದಿದ್ದು ಲವ್ ಮ್ಯಾಟ್ರು ಹೆಸರಿನ ಸಿನಿಮಾ ಆ.‌22 ರಂದು ಬಿಡುಗಡೆ ಆಗಲಿದೆ ಎಂದು ನಟ ಹಾಗೂ ನಿರ್ದೇಶಕ ವಿರಾಟ ಬಿಲ್ವ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ, ನಾನು ಹಾಸನದ ಹುಡುಗ. ಪ್ರೀತಿ ಅಂದ್ರೆ ಏನು ಹೇಗೆ ಹುಟ್ಟುತ್ತೆ ಎಂಬುದರ ಮೇಲೆ ಕಥೆ ಹೆಣೆಯಲಾಗಿದೆ. ಹಿರಿಯ ಮತ್ತು ಕಿರಿಯ ಜನರೇಷನ್ ನ ಕಥೆ ಒಳಗೊಂಡಿದೆ.

ಅಚ್ಯುತ್ ಕುಮಾರ್, ಸುಮನ್ ರಂಗನಾಥ್, ಅನಿತಾ ಭಟ್, . ಸೋನಲ್ ಮಂತೆರೊ, ಸುಷ್ಮಿತಾ ಗೋಪಿನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದರು. ಆ ದಿನಗಳು ಖ್ಯಾತಿಯ ಕೆ.ಎಂ. ಚೇತನ್ ಅವರ ಮಾರ್ಗದರ್ಶನದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೆನೆಂದರು.

ಉಗ್ರಂ ಸಿನಿಮಾದಲ್ಲಿ ಪತ್ರಕರ್ತನ ಪಾತ್ರ, ಕಡ್ಡಿಪುಡಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಾನು ನಟಿಸಿ ನಿರ್ದೇಶಿಸಿರುವ ಸಿನಿಮಾವನ್ನು ಪ್ರೇಕ್ಷಕರು ಬೆಂಬಲಿಸುವ ವಿಶ್ವಾಸವಿದೆ ಎಂದರು.ನಿರ್ಮಾಪಕಿ ವಂದನ ಪ್ರಿಯ ಇದ್ದರು.

error: Content is protected !!