ಹಾಸನ: ಆಚಾರ್ಯ ವಾಣಿಜ್ಯ ಕಾಲೇಜಿನಲ್ಲಿ ಕ್ಯಾಲೆಂಡರ್ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮ

Acharya Commerce College's calendar release and lecture program have been organized at Acharya Commerce College today, said Dr. Adarsh ​​HR, the college's principal.

ಹಾಸನ : ಇಂದು ಆಚಾರ್ಯ ವಾಣಿಜ್ಯ ಕಾಲೇಜಿನಲ್ಲಿ ಆಚಾರ್ಯ ಕಾಮರ್ಸ್ ಕಾಲೇಜಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾoಶುಪಾಲ ಡಾ. ಆದರ್ಶ ಹೆಚ್ ಆರ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕ ನುಡಿಯನ್ನು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ್ ನುಡಿದರು. ಅಧ್ಯಕ್ಷತೆಯನ್ನು ಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕೆ ಆರ್ ವಹಿಸಿದರು. ಉದ್ಘಾಟನೆಯನ್ನು ಪ್ರಾoಶುಪಾಲ ಡಾ ಆದರ್ಶ ಹೆಚ್ ಆರ್ ನೆರವೇರಿಸಿದರು.

ಪರೀಕ್ಷೆ ಒಂದು ಹಬ್ಬ ಎಂಬ ವಿಷಯದ ಕುರಿತು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಶಾಂತ್ ಕುಮಾರ್ ಹಾಗೂ ಮೌಲ್ಯ ಶಿಕ್ಷಣದ ಕುರಿತು ಬಸವಘಟ್ಟ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಪುಷ್ಪ ಪಿ. ಎಚ್. ವಿಷಯ ಮಂಡನೆ ಮಾಡಿದರು. ಚಲನಚಿತ್ರ ನಾಯಕ ನಟ ಮನು.ಯು. ಬಿ ಗೌರವ ಉಪಸ್ಥಿತಿ ‌ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ, ಉಪಪ್ರಾoಶುಪಾಲ ಕುಮಾರ್,ಡಿ ಆರ್,ಮುಖ್ಯ್ಯೊಪಾಧ್ಯಯರಾದ ಅನಿಸ ಎಂ ಜೆ, ಹೇಮಾ,ಡೆಕ್ಕನ್ ವ್ಯಾಲಿ ಇಂಟರ್ನೆಷನಲ್ ಶಾಲೆಯ ಕಾರ್ಯದರ್ಶಿ ಸುನಿಲ್, ಚುಟುಕು ಸಾಹಿತ್ಯ ಪರಿಷತ್ ದುದ್ದ ಹೋಬಳಿ ಅಧ್ಯಕ್ಷೆ ಪೂರ್ಣಿಮಾ ಇನ್ನಿತರರು ಉಪಸ್ಥಿತರಿದ್ದರು.

Acharya Commerce College’s calendar release and lecture program have been organized at Acharya Commerce College today, said Dr. Adarsh ​​HR, the college’s principal.