ಬೇಲೂರು: ಪ್ರೀತಿ ದೇಶ, ಭಾಷೆ, ಜಾತಿ-ಧರ್ಮಗಳನ್ನು ಮೀರಿದ್ದು ಎನ್ನುವ ಮಾತನ್ನು ಸಾಬೀತು ಮಾಡುವ ವಿವಾಹವೊಂದು ಭಾನುವಾರ ಬೇಲೂರಿನಲ್ಲಿ ಜರುಗಿದೆ.
ಬೇಲೂರು ಮೂಲದ ಯುವತಿಯೊಬ್ಬರು ಇಂಗ್ಲೆಂಡ್ ಮೂಲದ ಯುವಕನೊಂದಿಗೆ ಭಾರತೀಯ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಧು ಹೇಮಶ್ರೀ ಅವರು ಬೇಲೂರು ತಾಲೂಕಿನ ಇಬ್ಬಿಡು ಗ್ರಾಮದ ವಿಜಯೇಂದ್ರ ಅವರ ಪುತ್ರಿ. ಇಂಗ್ಲೆಂಡ್ ಮೂಲದ ವರ ಜಾಯ್ ಅವರು ತಮ್ಮ ಕುಟುಂಬದೊಂದಿಗೆ ಇಂಗ್ಲೆಂಡ್ನಿಂದ ಬೇಲೂರಿಗೆ ಆಗಮಿಸಿ, ಸಂಪ್ರದಾಯಬದ್ಧವಾಗಿ ವಿವಾಹವಾದರು.
ಸುಮಾರು ಒಂದೂವರೆ ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಇಂಗ್ಲೆಂಡ್ಗೆ ತೆರಳಿದ್ದ ಹೇಮಶ್ರೀ ಅವರು ಅಲ್ಲಿ ತಮ್ಮ ಸಹೋದ್ಯೋಗಿಯಾಗಿ ಪರಿಚಯವಾಗಿದ್ದ ಜಾಯ್ ಅವರನ್ನು ಪ್ರೀತಿಸಿದ್ದರು.
ಇಬ್ಬರೂ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಬೇಲೂರಿನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ಈ ವಿವಾಹವು ಸ್ಥಳೀಯರ ಗಮನ ಸೆಳೆದಿದೆ.
A young woman from Belur has entered into married life with a young man from England, following the Indian Hindu tradition of Saptapadi.










