ಹಾಸನ: ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರ ಕಚೇರಿ ಹಾಗೂ ಕಾಲೇಜು ಕಚೇರಿ ಹಾಗೂ ಎಲ್ಲಾ ವಿಭಾಗದಲ್ಲಿ ಅಯಧ ಪೂಜೆ ಅಂಗವಾಗಿ ದೇವರ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾಲೇಜು ಆಡಳಿತ ಮಂಡಳಿಯ ಸಹಕಾರ ದೊಂದಿಗೆ ಪ್ರತಿ ವರ್ಷದಂತೆ ಕಾಲೇಜಿನ ಪ್ರಾಂಶುಪಾಲರ ಕಚೇರಿ, ಆಡಳಿತ ಕಛೇರಿ, ಎಲ್ಲಾ ವಿಭಾಗದಲ್ಲಿ ಅಯುಧ ಪೂಜೆ ದೇವರ ಪೂಜೆ ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ಮಲೆನಾಡು ಇಂಜಿನಿಯರಿಂಗ್ ಕಾಲೇಜು ನಿರ್ದೇಶಕರಾದ ಎಸ್. ಪ್ರದೀಪ್, ಪ್ರಾಂಶುಪಾಲರಾದ ಡಾ .ಹೆಚ್ ಜೆ.ಅಮರೇಂದ್ರ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಇಂದಿರಾ ಬಹದ್ದೂರು, ಸಹಾಯಕ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಶಿವಶಂಕರ, ಪರೀಕ್ಷಾ ವಿಭಾಗದ ಡೀನ್ ಡಾ. ಎ.ಎ. ಪ್ರಸನ್ನ, ರಿಜಿಸ್ಟ್ರಾರ್ ಕುಮುದ, ಅಧೀಕ್ಷಕರಾದ ಮಂಜುನಾಥ್. ಅರ್. ರಘಪ್ರಸಾದ್, ಬಿ. ಅರ್. ರವಿ, ಶಿವಪ್ಪನಾಯಕ್, ಮಾಧ್ಯಮ ಸಂಯೋಜಕ ಕಟ್ಟಾಯ ಶಿವಕುಮಾರ್. ಎ ಎಂ ಡೀನ್ ಮಲ್ಲಿಕಾರ್ಜುನ, ಪ್ರಾಧ್ಯಪಕರು, ಸಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.










