ಹಾಸನ: ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ಶುಕ್ರವಾರದಂದು ತಾಲ್ಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ನಡೆಸಲಾಯಿತು.ಸಮಾರಂಭದ ಮುಖ್ಯ ಅತಿಥಿಗಳಾದ ಶ್ರೀ ನಿಂಗಯ್ಯ ಎಮ್.ಎಸ್. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು, ಇವರು ಚೆಸ್ ಪಾನ್ನ್ನು ಮುನ್ನಡೆಸುವ ಮೂಲಕ ಉದ್ಘಾಟಿಸಿದರು.
ತಾಲ್ಲೂಕು ಮಟ್ಟದ ಪಂದ್ಯಾವಳಿಯಲ್ಲಿ ಎಲೈಟ್ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳಾದ ಭಾಗ್ಯ ಹೆಚ್. ಸುರೇಶ್, ಚೈತನ್ಯ ಹೆಚ್.ಎಸ್, ಚರಣ್ ಆರ್, ಸೂರ್ಯ ಕೆ, ಸಾಗರ್ ಹೆಚ್.ಜಿ, ನಕ್ಷತ್ರ, ಹರ್ಷಿತ ಹೆಚ್.ಎಸ್. ಇವರುಗಳು ತಾಲ್ಲೂಕು ಮಟ್ಟದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹೆಮ್ಮೆ ತಂದಿದ್ದಾರೆ.
ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳಾದ ಚರಣ್ ಆರ್, ಚೈತನ್ಯ ಹೆಚ್.ಎಸ್. ನಕ್ಷತ್ರ, ಹರ್ಷಿತ ಹೆಚ್.ಎಸ್. ಸೂರ್ಯ ಕೆ. ಇವರುಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಹೆಚ್.ಪಿ. ಕಿರಣ್ಗೌಡರ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಕೆ.ಎಮ್. ನಾಗರಾಜು ಶಾಲೆಯ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರೆಲ್ಲರೂ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ.










