ಹಾಸನ: ಕುರುಬ ಜಾತಿಯನ್ನು ಪರಿಶಿಷ್ಟ ಪಂಗಡ(ಎಸ್‌ಟಿ) ಪಂಗಡಕ್ಕೆ ಸೇರಿಸಬಾರದು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಸಭಾದಿಂದ ಶ್ರೀ ಮಠದ ಆದೇಶದ ಮೇರೆಗೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆ ಇರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದುವರಿದಿರುವ ಕುರುಬ ಜಾತಿಯಲ್ಲಿ ಯಾವುದೇ ಬುಡಕಟ್ಟು ಲಕ್ಷಣಗಳಿಲ್ಲ. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್‌ಟಿಗೆ ಸೇರಿಸಲು ಮುಂದಾಗಿರುವ ಹುನ್ನಾರ ಖಂಡನೀಯ.
ಕೂಡಲೇ ಸರ್ಕಾರ ಇಂತಹ ಪ್ರಯತ್ನ ಕೈ ಬಿಡಬೇಕು ಎಂದು ಸಭಾದ ಪದಾಧಿಕಾರಿಗಳು ಒತ್ತಾಯಿಸಿದರು. ವಿರೋಧದ ನಡುವೆಯೂ ಕುರುಬ ಜಾತಿಯನ್ನು ಎಸ್‌ಟಿ ಪಂಗಡಕ್ಕೆ ಸೇರಿಸಿದರೆ ಉಗ್ರ ಹೋರಾಟದ ಜೊತೆಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಸಭಾದ ಜಿಲ್ಲಾಧ್ಯಕ್ಷ ಎನ್.ಟಿ.ಶ್ರೀನಿವಾಸ್, ಯುವ ಘಟಕದ ರಾಜ್ಯ ಉಪಾಧ್ಯಕ್ಷ ರವಿಕುಮಾರ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ದೊಡ್ಡರಂಗಯ್ಯ, ಜಿಲ್ಲಾ ಉಪಾಧ್ಯಕ್ಷ ವಿರೂಪಾಕ್ಷ, ಯುವ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಬಿ. ಉಪಾಧ್ಯಕ್ಷ ಮಧು ಬಿ.ಡಿ., ಹರೀಶ್, ಬ್ರಹ್ಮದೇವರಹಳ್ಳಿ ಮಧು, ಗೌರವ ಅಧ್ಯಕ್ಷ ಸಂತೋಷ್ ಬಿ.ಸಿ., ಸಂತೋಷ್ ಸಿ., ಚರಣ್, ಮಲ್ಲಿಕ್, ಹಿರಿಯ ಮಾರ್ಗದರ್ಶಕ ಸಿದ್ದಮಲ್ಲನಾಯಕ ಎನ್.ಸಿ. ನರ‍್ಲಿಗೆ, ಬಲರಾಮಮೂರ್ತಿ ಬಿ.ಆರ್. ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಮೊದಲಾದವರಿದ್ದರು.










