10.4 C
Munich
Home News ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಹಾಸನದ ಐರಾ ವಿಹಾನ: ಚುರುಕು ...

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಹಾಸನದ ಐರಾ ವಿಹಾನ: ಚುರುಕು ಬುದ್ಧಿಗೆ ಫಿದಾ ಆಗದವರಿಲ್ಲ

ಹಾಸನ: ಒಂದೂವರೆ ವರ್ಷದ ಬಾಲಕಿ ಚಿಕ್ಕ ವಯಸ್ಸಿನಲ್ಲೇ ಅಗಾಧ ಪಾಂಡಿತ್ಯದಿಂದ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಹಾಗು ಕಲಾಂ ವರ್ಲ್ಡ್ ರೆಕಾರ್ಡ್‌ನಿಂದ ಪ್ರಮಾಣ ಪತ್ರ ಪಡೆದಿದ್ದಾರೆ.

ನಗರದ ಉದಯಗಿರಿ ನಿವಾಸಿಯಾದ ಪ್ರವೀಣ್‌ ದೇವಪ್ಪ ಹಾಗು ತನುಶ್ರೀ ಅವರ ಪುತ್ರಿ ಐರಾ ವಿಹಾನ ಸಾಧಕ ಬಾಲಕಿ. ಅತಿಚಿಕ್ಕ ವಯಸ್ಸಿನಲ್ಲೇ ಅದ್ಭುತ ಜ್ಞಾಪಕ ಶಕ್ತಿಯಿಂದಾಗಿ ಗುರುತರ ಸಾಧನೆ ಮಾಡಿರುವುದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಬಾಲಕಿ ಐರಾ ವಿಹಾನ ಶರೀರದ 17 ಅಂಗ, 23 ಪ್ರಾಣಿಗಳ ಹೆಸರು, 9 ಜಲಚರ ಪ್ರಾಣಿ, 17 ಹಣ್ಣು, 16 ತರಕಾರಿ, 9 ಕಾರು ಸಂಬಂಧಿತ ವಸ್ತುಗಳು, 6 ಪಕ್ಷಿ, 24 ಇತರ ವಸ್ತುಗಳನ್ನು ತನ್ನ ಬುದ್ದಿ ಕ್ಷಮತೆಯಿಂದ ನಿರಾಳವಾಗಿ ಗುರುತಿಸಿ ಅದರ ವಿವರಣೆಯನ್ನು ನೀಡುತ್ತಾಳೆ. ಜೊತೆಗೆ 9 ತುಣುಕುಗಳ ಆಕಾರದ ಪಝಲ್‌ ಹಾಗು 8 ತುಣುಕುಗಳ ತರಕಾರಿ, ಹಣ್ಣು ಮತ್ತು ವಾಹನಗಳ ಪಝಲ್‌ಗಳನ್ನು ಬಗೆಹರಿಸುತ್ತಾಳೆ. ಐರಾಳ ಈ ಸಾಧನೆಗಾಗಿ 2025ರ ಮೇ 20ರಂದು ಐಬಿಆರ್‌ ಹಾಗು ಅಬ್ದುಲ್‌ ಕಲಾಂ ವರ್ಲ್ಡ್ ರೆಕಾರ್ಡ್‌ ಪ್ರಮಾಣ ಪತ್ರ ನೀಡಿದೆ.

error: Content is protected !!