ಹಾಸನ : ನಗರದ ನವಕೀಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗಣಿತ ಆವಿಷ್ಕಾರದ ನಿರ್ಮಾರ್ತೃ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನದ ನಿಮಿತ್ತ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸ ನೀಡಿದ ಮೈಸೂರಿನ ಯುವರಾಜ ಕಾಲೇಜಿನ ಡಾ. ರೂಬಿ ಸೆಲೇಸ್ಟೀನಾ ಎಂ ಅವರು, ಪ್ರತಿನಿತ್ಯ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವವರೆಗೆ ಗಣಿತ ವಿಷಯ ನಿರ್ಣಾಯಕ ಪಾತ್ರ ವಹಿಸುತ್ತದೆ ಮತ್ತು ಶಿಕ್ಷಣದಲ್ಲಿ ಮಕ್ಕಳಿಗೆ, ಅವರ ಶೈಕ್ಷಣಿಕ ಯಶಸ್ಸು ಮತ್ತು ಭವಿಷ್ಯದ ವೃತ್ತಿ ಜೀವನಕ್ಕೆ ಗಣಿತದ ಅಡಿಪಾಯ ಅತ್ಯಗತ್ಯ. ಮಕ್ಕಳಿಗೆ ಗಣಿತದ ಪ್ರಾಮುಖ್ಯತೆ ಮತ್ತು ಅವರ ಕಲಿಕೆಯಲ್ಲಿ ಅದು ಏಕೆ ಪ್ರಮುಖ ಆದ್ಯತೆ ಆಗಿರಬೇಕು ಎಂಬುದನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ, ಇ.ಸಿ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಮಾತನಾಡಿ, ಗಣಿತ ಶಿಕ್ಷಣವು ನೀಡುವ ಅತ್ಯಮೂಲ್ಯ ಕೌಶಲ್ಯ ವೆಂದರೆ, ಸಮಸ್ಯೆ ಪರಿಹರಿಸುವುದು. ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪರಿಸ್ಥಿತಿ ವಿಶ್ಲೇಷಿಸಲು, ಅವುಗಳ ಮಾದರಿ ಗುರುತಿಸಿ ಮತ್ತು ಪರಿಹಾರ ಕಂಡು ಹಿಡಿಯಲು, ಜ್ಞಾನದ ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದರು.
ಗಣಿತ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಆರ್, ಗಣಿತದಲ್ಲಿ ಯಶಸ್ವಿಯಾಗುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿವುದು. ನೀವು ಸಮಸ್ಯೆಗಳನ್ನು ಪರಿಹರಿಸಿ ಮತ್ತು ಗಣಿತದ ಪರಿಕಲ್ಪನೆಗಳನ್ನು ಕರಗತ ಮಾಡಿಕೊಂಡಂತೆ, ನೀವು ಸಾಧನೆಯ ಅರ್ಥ ಪಡೆಯುತ್ತೀರಿ ಎಂದರು.
ಗಣಿತ ವಿಭಾಗದ ಸುಮಾ ಅವರು ರಾಮಾನುಜನ್ ಅವರ ಬಗ್ಗೆ ಪರಿಚಯ ಮಾಡಿಕೊಟ್ಟರು. ವಿನಯ್ ಕೆ ಸ್ವಾಗತಿಸಿದರು, ನವೀನ್ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಮೋಹನ್ ಕುಮಾರ್, ಡಾ. ವಿವೇಕಾನಂದ ಹಾಗೂ ಕಾಲೇಜಿನ ಅಧ್ಯಾಪಕರ ವೃಂದದವರಾದ ಪಲ್ಲವಿ, ಸಹನಗೌಡ, ಶೋಭಾ , ಅರ್ಪಿತಾ, ಆನಂದ್ ಕೆ.ವಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
A lecture program was organized at Navakis Technical College in Hassan city to mark the birth anniversary of Srinivasa Ramanujan, the father of mathematical invention.










