ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಗ್ರಾಮದ ಜ್ಞಾನಪ್ರಭ ಇಂಟರ್ ನ್ಯಾಷನಲ್ ಶಾಲೆಯ ೩ನೇ ತರಗತಿ ವಿದ್ಯಾರ್ಥಿನಿ ಎ.ಗಾನ್ವಿತ ಹಾಗೂ ಎಲ್‌ಕೆಜಿ ವಿದ್ಯಾರ್ಥಿನಿ ಎ.ಚೆರಿಷ್ಯ ಎಂಬ ವಿದ್ಯಾರ್ಥಿಗಳು ಇತ್ತೀಚಿಗೆ ಜರುಗಿದ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆಗೈದು ವಿಶ್ವದಾಖಲೆ ಬರೆದಿದ್ದಾರೆ.
ವಿದ್ಯಾರ್ಥಿನಿ ಎ.ಗಾನ್ವಿತಾ ಕೇವಲ ೧೦ ನಿಮಿಷ ೬ ಸೆಕೆಂಡುಗಳಲ್ಲಿ ಹಾಗೂ ಎ.ಚೆರಿಷ್ಯ ೧೧ ನಿಮಿಷ ೫೩ ಸೆಕೆಂಡ್ ೬೩ ಸೆಂಟಿ ಸೆಕೆಂಡುಗಳಲ್ಲಿ ವಿಶ್ವದ ಎಲ್ಲಾ ದೇಶಗಳು, ರಾಜಧಾನಿಗಳು, ಕರೆನ್ಸಿಗಳು, ರಾಷ್ಟಿçÃಯ ಕ್ರೀಡೆಗಳು, ಭಾವುಟಗಳು, ದೇಶಗಳ ಅಧಿಕೃತ ಭಾಷೆಗಳು ಹಾಗೂ ವಿಶ್ವದ ಎಲ್ಲಾ ಖಂಡಗಳ ಹೆಸರುಗಳನ್ನು ಹೇಳುವ ಮೂಲಕ ವಿಶ್ವ ದಾಖಲೆ ಬರೆದು ಸಾಧನೆ ಮಾಡಿದ್ದಾರೆ.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎ.ಜಿ.ಪ್ರಭಾಕರ್ ಮಾತನಾಡಿ, ಶಾಲೆಯು ಸಿಐಎಸ್‌ಸಿಇ ಬೋರ್ಡ್ ನವದೆಹಲಿ ವತಿಯಿಂದ ಮಾನ್ಯತೆ ಪಡೆದಿದ್ದು ಐಸಿಎಸ್‌ಈ ಪಠ್ಯ ಕ್ರಮವನ್ನು ಅನುಸರಿಸುತ್ತಿದೆ. ಜತೆಗೆ ಬಹುತೇಕ ಸ್ವರ್ಧಾತ್ಮಕ ವಿಷಯಗಳಲ್ಲಿ ತನ್ನ ವಿದ್ಯಾರ್ಥಿಗಳನ್ನು ಪರಿಚಯಿಸುವ ಮೂಲಕ ಸಾಕಷ್ಟು ಸಾಧನೆ ಮಾಡಿದೆ ಎಂದರು.
ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮ ವಹಿಸಿದ್ದಲ್ಲಿ ಎಂತಹ ಸಾಧನೆ ಬೇಕಾದರೂ ಮಾಡಬಹುದು. ಈ ವಿದ್ಯಾರ್ಥಿಗಳ ಸಾಧನೆ ಶಾಲೆಯ ಉಳಿದ ಮಕ್ಕಳಿಗೂ ಸ್ಫೂರ್ತಿಯ ಪ್ರತೀಕ ಸಾಧನೆ ನಿರಂತರವಾಗಿರಲಿ ಎಂದು ಹಾರೈಸಿದರು.
ಈ ಹಿಂದೆ ಇದೇ ಮಕ್ಕಳು ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದರು. ಇದರಿಂದ ಶಾಲೆಗಷ್ಟೇ ಅಲ್ಲದೆ ವಿದ್ಯಾರ್ಥಿಗಳ ಪೋಷಕರಿಗೂ ಹಾಗೂ ಅವರ ಹುಟ್ಟೂರಿಗೂ ಕೀರ್ತಿ ಸಿಗಲಿದೆ ಎಂದು ತಿಳಿಸಿದರು.
ಸಾಧನೆ ಮಾಡಿದ ಶಾಲೆಯ ಪ್ರತಿಭಾನ್ವಿತಾ ವಿದ್ಯಾರ್ಥಿಗಳನ್ನು ಸೋಮವಾರ ಶಾಲಾ ವತಿಯಿಂದ ಅಭಿನಂಧಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಹರೀಶ್.ಎಂ.ಕೆ, ಪ್ರಾಂಶುಪಾಲ ಸಂಜಯ್ ಕ್ರಿಸ್ಟೋಫರ್, ಸಾಧನೆ ಮಾಡಿರುವ ವಿದ್ಯಾರ್ಥಿಗಳ ಪೋಷಕರಾದ ಅನಂತ್ ಹಾಗೂ ಯಶೋಧ, ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.










