1.4 C
Munich
Home ಕ್ರೈಮ್‌ ಗುಂಡು ಹಾರಿಸಿಕೊಂಡು ಕಾಫಿ ಬೆಳೆಗಾರ ಆತ್ಮಹತ್ಯೆ

ಗುಂಡು ಹಾರಿಸಿಕೊಂಡು ಕಾಫಿ ಬೆಳೆಗಾರ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತ ಕಾಫಿ ಬೆಳೆಗಾರರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಬಾಚೀಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕರುಣಾಕರ (40) ಆತ್ಮಹತ್ಯೆಗೆ ಶರಣಾದವರು.
ಇಂದು ಮನೆಯಲ್ಲಿಯೇ ತಮ್ಮ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ.

ಸ್ಥಳಕ್ಕೆ ಯಸಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!