4.2 C
Munich
Home News ಹೊಳೆನರಸೀಪುರ: ವಾಸವಾಂಬ ಕೋ ಆಪರೇಟಿವ್ ಬ್ಯಾಂಕ್‌ನ ೧೦೯ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಹೊಳೆನರಸೀಪುರ: ವಾಸವಾಂಬ ಕೋ ಆಪರೇಟಿವ್ ಬ್ಯಾಂಕ್‌ನ ೧೦೯ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಹೊಳೆನರಸೀಪುರ: ಪಟ್ಟಣದ ಪ್ರತಿಷ್ಟಿತ ಶ್ರೀ ವಾಸವಾಂಬ ಕೋ ಆಪರೇಟಿವ್ ಬ್ಯಾಂಕ್‌ನ ೨೦೨೪-೨೦೨೫ನೇ ಸಾಲಿನ ೧೦೯ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಇತ್ತೀಚೆಗೆ ಶ್ರೀ ಕನ್ನಿಕಾಪರಮೇಶ್ವರ ಅಮ್ಮನವರ ದೇವಸ್ಥಾನದಲ್ಲಿ ಬ್ಯಾಂಕ್ ಅಧ್ಯಕ್ಷ ಎನ್.ಗೌತಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಯಾಂಕ್‌ನ ಅಭಿವೃದ್ಧಿ ಮತ್ತು ಪ್ರಗತಿಗೆ ಸಮರ್ಪಣಾ ಮನೋಭಾವದಿಂದ ಬ್ಯಾಂಕ್ ಸಿ.ಇ.ಒ. ಎಸ್.ಆರ್.ಮೂರ್ತಿ ಅವರ ಸಾರಥ್ಯದಲ್ಲಿ, ದುಡಿಮೆ ಮಾಡುತ್ತಿರುವ, ಹೊಳೆನರಸೀಪುರ, ಅರಕಲಗೂಡು ಮತ್ತು ಚನ್ನರಾಯಪಟ್ಟಣದ ಸಿಬ್ಬಂದಿ ವರ್ಗದವರಿಗೆ, ಬ್ಯಾಂಕ್ ಅಭಿವೃದ್ಧಿಗೆ ವಿಶೇಷವಾಗಿ ಕೊಡುಗೆ ಮತ್ತು ಸಹಕಾರ, ಮಾರ್ಗದರ್ಶನ ನೀಡುತ್ತಿರುವ ಷೇರುದಾರರಿಗೆ ಮತ್ತು ಬ್ಯಾಂಕ್‌ನ ಗ್ರಾಹಕರಿಗೆ ಮತ್ತು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರಿಗೆ, ಬ್ಯಾಂಕ್ ಸಾಧನೆಗೆ ಸಹಕಾರ ನೀಡಿದ ಎಲ್ಲಾ ಮಾಜಿ ಅಧ್ಯಕ್ಷರಿಗೆ, ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ, ಷೇರುದಾರರಿಗೆ ಮತ್ತು ಗ್ರಾಹಕರಿಗೆ ಧನ್ಯವಾದ ಹೇಳಿದರು.

ಮತ್ತಷ್ಟು ಅತ್ಯಾಧುನಿಕ ತಂತ್ರಜ್ಞಾನದ ಸೇವೆ ನೀಡುವಲ್ಲಿ ಬ್ಯಾಂಕ್ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ತಿಳಿಸಿ, ಬ್ಯಾಂಕ್‌ನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ನೂತನ ಸೇವೆ ಕ್ಯೂಆರ್ ಕೋಡ್ ಮತ್ತು ಸೌಂಡ್ ಬಾಕ್ಸ್ಗೆ ಚಾಲನೆ ನೀಡಿದರು. ಸಿ.ಒ.ಒ. ಎಸ್.ಆರ್.ಮೂರ್ತಿ ಬ್ಯಾಂಕ್‌ನ ಆರ್ಥಿಕ ವ್ಯಾಪಾರ ವಹಿವಾಟು ಮತ್ತು ಚಿತ್ರಣವನ್ನು ಸಭೆಗೆ ನೀಡಿದರು.

ಮಹಾಸಭೆಯಲ್ಲಿ. ಬ್ಯಾಂಕ್‌ನ ಉಪಾಧ್ಯಕ್ಷ ಎನ್.ಸುಭಾಷ್, ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಶ್ರೀಧರ್, ಎನ್.ಜಿ.ಮುಕುಂದ, ವಿ.ಎ.ಕೃಷ್ಣ, ಎಸ್.ಗೋಕುಲ್, ಎನ್.ಕಿರಣ್, ಎಸ್.ರೋಹಿತ್, ಹೆಚ್.ಎಸ್.ಸ್ಪಂದನ್, ಹೆಚ್.ಎಸ್.ಶಶಿಕಲಾ, ಹೆಚ್.ಎಂ.ಜ್ಯೋತಿ ಮುರಳಿ, ವೃತ್ತಿಪರ ನಿರ್ದೇಶಕರಾದ ಕೆ.ವಿ.ಸುಮಂತ್, ಡಿ.ಎಸ್.ಫಣಿದತ್ತ, ಮತ್ತು ಹೊಳೆನರಸೀಪುರ ಶಾಖೆಯ ವ್ಯವಸ್ಥಾಪಕ ಎಂ.ಪಿ.ದಿನೇಶ್, ಅರಕಲಗೂಡು ಶಾಖೆ ವ್ಯವಸ್ಥಾಪಕ ಎಸ್.ಸುನಿಲ್, ಚನ್ನರಾಯಪಟ್ಟಣ ಶಾಖೆ ವ್ಯವಸ್ಥಾಪಕ ಕೆ.ಎನ್.ವಿಶ್ವಾಸ್, ಮಾಜಿ ಅಧ್ಯಕ್ಷರಾದ ಎ.ಆರ್. ರವಿಕುಮಾರ್, ಮಯೂರ್ ಮಂಜಣ್ಣ, ಮುರಳೀಧರ ಗುಪ್ತ, ಕೆ.ಜಿ.ಸುರೇಂದ್ರ ಗುಪ್ತ, ಕೆ.ಎನ್.ಅರುಣ್ ಮತ್ತು ಗಣೇಶ್, ಉದಯಭಾನು ಮೊದಲಾದವರಿದ್ದರು.

error: Content is protected !!