12.9 C
Munich
Home News ಪೌರ ಕಾರ್ಮಿಕರ ಸೇವೆ ಕೊಂಡಾಡಿದ ಶಾಸಕ ಸಿ.ಎನ್.ಬಾಲಕೃಷ್ಣ

ಪೌರ ಕಾರ್ಮಿಕರ ಸೇವೆ ಕೊಂಡಾಡಿದ ಶಾಸಕ ಸಿ.ಎನ್.ಬಾಲಕೃಷ್ಣ

ಚನ್ನರಾಯಪಟ್ಟಣ: ಪುರಸಭೆಯ  ಪೌರಕಾರ್ಮಿಕರ ಹೆಚ್ಚಿನ ಪರಿಶ್ರಮದಿಂದ ಜಿಲ್ಲೆಯಲ್ಲೇ ಚನ್ನರಾಯಪಟ್ಟಣ ಸ್ವಚ್ಛ ತಾಲೂಕು ಕೇಂದ್ರವೆಂದು ಪ್ರಥಮ ಸ್ಥಾನ ಪಡೆದಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

 ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ  ಸ್ವಚ್ಛತಾ ಆಂದೋಲನಕ್ಕೆ  ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆಯಲ್ಲಿ  ಪ್ರಥಮ ಸ್ಥಾನ ಪಡೆದಿದೆ. ಇದರಿಂದ  ಉತ್ತಮ ವಾತಾವರಣದಿಂದ  ಪಟ್ಟಣದ ನಿವಾಸಿಗಳಿಗೆ  ಶುದ್ಧ ಗಾಳಿ ಸಿಗಲಿದೆ  ಪೌರಕಾರ್ಮಿಕರ  ಕೆಲಸ ಅನನ್ಯವಾಗಿದೆ ಎಂದರು.
 ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ ಭಾಗಗಳಲ್ಲಿ  ಪುರಸಭೆಯ  ಪೌರಕಾರ್ಮಿಕರ  ನೆರವಿನಿಂದ ಸುಮಾರು ಒಂದು ವಾರ ಕಾಲ  ಸ್ವಚ್ಛತೆಗೆ  ಆದ್ಯತೆ ನೀಡಲಾಗಿದೆ  ನುಗ್ಗೇಹಳ್ಳಿ ಹೋಬಳಿ ಕೇಂದ್ರ ದಿನೇ ದಿನೇ ಹೆಚ್ಚು  ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ  ಗ್ರಾಮ ಪಂಚಾಯಿತಿ  ವತಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ  ತಮ್ಮ ಮನವಿ ಮೇರೆಗೆ  ಪೌರಕಾರ್ಮಿಕರು  ಸ್ವಯಂ ಪ್ರೇರಿತರಾಗಿ  ಸ್ವಚ್ಛತಾ ಕಾರ್ಯದಲ್ಲಿ  ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
 ಗ್ರಾಮ ಪಂಚಾಯಿತಿ ಅಧ್ಯಕ್ಷ  ಎನ್. ಆರ್ .ಶಿವಕುಮಾರ್ ಮಾತನಾಡಿ, ಶಾಸಕರ ಮನವಿ ಮೇರೆಗೆ  ಪೌರಕಾರ್ಮಿಕರು  ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿ ಬರುವ  ಕರ್ನಾಟಕ ಪಬ್ಲಿಕ್ ಶಾಲೆ  ಹಾಗೂ ಪೊಲೀಸ್ ವಸತಿ ನಿಲಯದ ಮುಂಭಾಗ  ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಿಪಟೂರು ರಸ್ತೆಯಲ್ಲಿ  ಸ್ವಚ್ಛತಾ ಕಾರ್ಯಕ್ಕೆ  ಮಾನ್ಯ ಶಾಸಕರು ಚಾಲನೆ ನೀಡಿದ್ದಾರೆ  ಮುಂಬರುವ ದಿನಗಳಲ್ಲಿ  ಸ್ವಚ್ಛತೆ ಹಾಗೂ  ಕುಡಿಯುವ ನೀರು  ಸೇರಿದಂತೆ  ಮೂಲಸೌಕರ್ಯ ಅಭಿವೃದ್ಧಿಗೆ  ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
   ಎಪಿಎಂಸಿ ಮಾಜಿ ಅಧ್ಯಕ್ಷ  ದೊರೆಸ್ವಾಮಿ, ನಾಗರಿಕ ವೇದಿಕೆ ಅಧ್ಯಕ್ಷ  ತೋಟಿ ನಾಗರಾಜ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷ  ಹುಲಿಕೆರೆ ಸಂಪತ್ ಕುಮಾರ್, ಗ್ರಾಪಂ ಸದಸ್ಯರಾದ ಹೊನ್ನೇಗೌಡ, ಎನ್ಎಸ್ ಮಂಜುನಾಥ್, ನಟರಾಜ್ ಯಾದವ್, ರಮ್ಯಾ ಲೋಕೇಶ್, ಮುಖಂಡರಾದ ಎನ್ ಎಸ್ ಲಕ್ಷ್ಮಣ್ , ಮಹಾದೇವಮ್ಮ ಶಂಕರ್, ಕೃಷಿ ಪತ್ತಿನ ನಿರ್ದೇಶಕ ಪಟೇಲ್ ಕುಮಾರ್, ಸುಹೀಲ್, ಅಪ್ಪಾಜಿ, ಜೆಸಿಬಿ ಶೇಖರ್, ಪಿಡಿಒ  ಶಿವರಾಂ, ಬಿಲ್ ಕಲೆಕ್ಟರ್ ನಾಗರಾಜು, ಸೇರಿದಂತೆ ಇತರರು ಹಾಜರಿದ್ದರು.
error: Content is protected !!