ಪಾಟ್ನಾ: ನಾಯಿಯ ಹೆಸರು ಡಾಗ್ ಬಾಬು, ತಂದೆಯ ಹೆಸರು ಕುಟ್ಟ ಬಾಬು, ತಾಯಿಯ ಹೆಸರು ಕುತಿಯಾ ದೇವಿ ಹೆಸರುಗಳನ್ನೊಳಗೊಂಡು ಬಿಹಾರ ಸರ್ಕಾರದ ಅಧಿಕೃತ ವಾಸ ದೃಢೀಕರಣ ಪ್ರಮಾಣ ಪತ್ರವೇ ಇಶ್ಯೂ ಆಗಿದೆ.
ಬಿಹಾರದ ಪಾಟ್ನಾದ ಮಸೌರ್ಹಿ ಬ್ಲಾಕ್‌ನಲ್ಲಿ ಇಶ್ಯೂ ಆಗಿದ್ದು, ಸರ್ಟಿಫಿಕೆಟ್ ಆನ್ ಲೈನ್ ನಲ್ಲಿ ಸಖತ್ ವೈರಲ್ ಆಗುವುದರ ಜತೆಗೆ ಗೊಂದಲವನ್ನೂ ಉಂಟು ಮಾಡಿದೆ. ಕಂದಾಯ ಅಧಿಕಾರಿಯೊಬ್ಬರು ಡಿಜಿಟಲ್ ಸಹಿ ಮಾಡಿದ ಈ ದಾಖಲೆಯು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನು ಹುಟ್ಟುಹಾಕಿತ್ತು.
ನಂತರ ಅಧಿಕಾರಿಗಳು ಅದನ್ನು ರದ್ದುಗೊಳಿಸಲು ಮತ್ತು ಸಹಿಯನ್ನು ತೆಗೆದುಹಾಕಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಈಗ, ಪಾಟ್ನಾ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದು, ಭವಿಷ್ಯದಲ್ಲಿ ಇಂತಹ ಮುಜುಗರದ ದೋಷಗಳನ್ನು ತಡೆಗಟ್ಟಲು ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.










