ಹಾಸನ: ಹೃದಯಾಘಾತಕ್ಕೆ ಜಿಲ್ಲೆಯಲ್ಲಿ ಶನಿವಾರ ಇಬ್ಬರ ಬಲಿಯಾಗಿದ್ದಾರೆ.

ಬೆಳಗ್ಗೆ ಹಾಸನದ ಆಟೋ ಚಾಲಕ ಗೋವಿಂದ(35), ಸಂಜೆ ಹಾಸನ ತಾಲೂಕು,ಕಟ್ಟಾಯ ಹೋಬಳಿ ಹ್ಯಾರಾನೆ ಗ್ರಾಮದ ಗಿರೀಶ್ ( 41) ಹೃದಯಾಘಾತದಿಂದ ಮೃತರಾಗಿದ್ದಾರೆ.
ಜೋಳದ ಹೊಲಕ್ಕೆ ಗೊಬ್ಬರ ಹಾಕಿ ಮಧ್ಯಾಹ್ನ ಮನೆಗೆ ಬಂದ ಗಿರೀಶ್ ಕುಸಿದು ಬಿದ್ದರು. ಅವರನ್ನು ಗ್ರಾಮಸ್ಥರು ತಕ್ಷಣ ಹಾಸನಕ್ಕೆ ಚಿಕಿತ್ಸೆಗಾಗಿ ಕರೆ ತರುವ ವೇಳೆಗೆ ಮಾರ್ಗ ಮಧ್ಯೆಯೇ ಮೃತಪಟ್ಟರು.
ಗಿರೀಶ್ ಅವರು ಬಿಎಂಟಿಸಿ ಚಾಲಕರಾಗಿದ್ದು, ರಜೆ ಇದ್ದ ಕಾರಣ ಊರಿಗೆ ಬಂದು ಜೋಳದ ಹೊಲಕ್ಕೆ ತೆರಳಿದ್ದರು.










