ಹಾಸನ: ವಿಜಯ ಕರ್ನಾಟಕ ದಿನಪತ್ರಿಕೆ ಹಿರಿಯ ವರದಿಗಾರ ಜಿ.ಪ್ರಕಾಶ್ ಅವರ ಚೊಚ್ಚಲ ಕಾದಂಬರಿ ‘ನನ್ಸಿರಿ, ಒಲವೇ ಸಿರಿಯು… ನಗುವೇ ನಿಧಿಯು…’ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ನಯನಾ ಸಭಾಂಗಣದಲ್ಲಿ ಜೂ.28ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.
ಹಾಡ್ಲಹಳ್ಳಿ ಪಬ್ಲಿಕೇಷನ್ ಹೊರತರುತ್ತಿರುವ ಉತ್ಕಟ ಪ್ರೇಮಕಥಾ ಹಂದರದ ಕಾದಂಬರಿಯನ್ನು ವಿಜಯ ಕರ್ನಾಟಕ ಪ್ರಧಾನ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ಜೋಗಿ ಅಧ್ಯಕ್ಷತೆ ವಹಿಸುವರು. ಸಾಹಿತಿ ವಿದ್ಯಾರಶ್ಮಿ ಪೆಲತ್ತಡ್ಕ ಕೃತಿ ಪರಿಚಯಿಸುವರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ಎಚ್.ಬಿ.ಮದನಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿ.ಪ್ರಕಾಶ್ ಕೃತಿಕಾರರ ನುಡಿಗಳನ್ನಾಡುವರು.

ತಮ್ಮೆಲ್ಲ ಆತ್ಮೀಯರು, ಹಿತೈಷಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿ.ಪ್ರಕಾಶ್ ಆಹ್ವಾನಿಸಿದ್ದಾರೆ.










