ಹಾಸನ, ಜೂನ್ 21, 2025: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯ ಮತ್ತು ದೇಶದ ಭವಿಷ್ಯದ ಬಗ್ಗೆ ಆಘಾತಕಾರಿ ಭವಿಷ್ಯವನ್ನು ನುಡಿದಿದ್ದಾರೆ. ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ರಾಜಕೀಯ ವಿಪ್ಲವದ ಲಕ್ಷಣಗಳು ಕಾಣಿಸಲಿವೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.
ಭವಿಷ್ಯದ ಪ್ರಮುಖ ಅಂಶಗಳು:
–ರಾಜಕೀಯ ಅಸ್ಥಿರತೆ: ಭಾರತದಲ್ಲಿ ಊಹಿಸಲಾಗದ ದುಃಖ ಮತ್ತು ರಾಜಕೀಯ ಗೊಂದಲ ಉಂಟಾಗಲಿದೆ. “ಮೇಘ ಸ್ಪೋಟ, ಯುದ್ಧ, ಅರಸನಾಲಯಕ್ಕೆ ಕಾರ್ಮೋಡ ಕವಿಯಲಿದೆ” ಎಂದು ಶ್ರೀಗಳು ಹೇಳಿದರು.
-ಪ್ರಕೃತಿ ವಿಕೋಪ: ಜನವರಿ 2026ರ ಸಂಕ್ರಾತಿ ಒಳಗೆ ಮೇಘ ಸ್ಪೋಟ, ಜಲಸ್ಫೋಟ, ವಾಯು ಮತ್ತು ಭೂ ಪ್ರಳಯದಂತಹ ವಿಕೋಪಗಳು ಸಂಭವಿಸಲಿವೆ. ಸಾಗರದಲ್ಲಿ ಜಲಸ್ಫೋಟದ ಭವಿಷ್ಯವನ್ನೂ ಶ್ರೀಗಳು ಹೇಳಿದ್ದಾರೆ.
– ಮರುಕಳಿಸಲಿದೆ ಕರೊನಾ: ಕರೊನವು ಇನ್ನೊಂದು ರೂಪದಲ್ಲಿ ಕಾಣಿಸಿಕೊಳ್ಳಲಿದೆ, ಆದರೆ ಸಾವು-ನೋವು ಕಡಿಮೆಯಾದರೂ ಸಮಸ್ಯೆ ಮುಂದುವರಿಯಲಿದೆ.
– ಸಾಮಾಜಿಕ ಗೊಂದಲ: ದ್ವೇಷ, ಅಸೂಯೆಯಿಂದ ಒಂದಿಬ್ಬರು ಬಲಿಯಾಗುವ ಸಾಧ್ಯತೆಯಿದೆ. ಜನಜೀವನ ಅಸ್ಥಿರವಾಗಲಿದೆ.
– ಮಳೆ ವಿಪರೀತ: ಈ ವರ್ಷ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದರೂ, ಅಕಾಲಿಕ ಮಳೆಯಿಂದ ತೊಂದರೆಯಾಗಲಿದೆ.
ಸಿದ್ದರಾಮಯ್ಯಗೆ ಭಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ತೊಂದರೆಯಿಲ್ಲ ಎಂದ ಶ್ರೀಗಳು”ಮೋಡ ಬರುತ್ತೆ, ಮೋಡ ಹೋಗುತ್ತೆ” ಎಂದು ಮಾರ್ಮಿಕವಾಗಿ ಹೇಳಿದರು.
ರಹಸ್ಯಮಯ ಭವಿಷ್ಯ: “ಸೂಳೆಯಾ ಮಗನುಟ್ಟಿ, ಆಳುವನು ಮುನಿಪುರವ, ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು” ಎಂಬ ಶ್ರೀಗಳ ಭವಿಷ್ಯದ ಅರ್ಥವನ್ನು ಮುಂದೆ ವಿವರಿಸುವುದಾಗಿ ತಿಳಿಸಿದರು.
ದೇಶ-ವಿದೇಶದ ಭವಿಷ್ಯ: ಕೆಲವು ದೇಶಗಳು ಮುಳುಗಲಿದ್ದು, ಕೆಲವು ಏಳಲಿವೆ. ಯುದ್ಧದ ಸಾಧ್ಯತೆ ಸಂವತ್ಸರದವರೆಗೆ ಕಷ್ಟಕರವಾಗಿದೆ ಎಂದು ಶ್ರೀಗಳು ಹೇಳಿದರು.










