10.1 C
Munich

**ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ**

*ಹಾಸನ, ಜೂನ್ 12, 2025*: ಹಾಸನ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

**ಬಸ್‌ನಲ್ಲಿ ಪ್ರಯಾಣಿಸುವಾಗಲೇ ಸಾವು**: ಆಲೂರು ತಾಲ್ಲೂಕಿನ ಮಗ್ಗೆ ಗ್ರಾಮದ ಬಳಿ ನಡೆದ ಘಟನೆಯಲ್ಲಿ ಬಿ.ಆರ್.ನಾಗಪ್ಪ (55) ಎಂಬುವವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹಾಸನ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗಪ್ಪ, ಇಂದು ಮಗ್ಗೆಯಿಂದ ಆಲೂರಿಗೆ KA-13-F-2239 ಬಸ್‌ನಲ್ಲಿ ಪ್ರಯಾಣಿಸುವಾಗ ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

**ಮಾಜಿ ನಗರಸಭೆ ಸದಸ್ಯರಿಗೂ ದುರಂತ**: ಇನ್ನೊಂದು ಘಟನೆಯಲ್ಲಿ ಹಾಸನ ನಗರದ ಅರಳೇಪೇಟೆ ಬಡಾವಣೆಯ ನಿವಾಸಿ, ಮಾಜಿ ನಗರಸಭೆ ಸದಸ್ಯ ಹಾಗೂ ಜಿಲ್ಲಾ ವೀರಶೈವ ಲಿಂಗಾಯಿತ ಸಂಘದ ನಿರ್ದೇಶಕರಾಗಿದ್ದ ನೀಲಕಂಠಪ್ಪ (58) ತಮ್ಮ ಮನೆಯಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಈ ಎರಡೂ ಘಟನೆಗಳು ಜಿಲ್ಲೆಯಲ್ಲಿ ಆಘಾತ ಮೂಡಿಸಿದ್ದು, ಕುಟುಂಬದವರಿಗೆ ಸಾಂತ್ವನ ಹೇಳುವಂತಾಗಿದೆ.

error: Content is protected !!