19.5 C
Munich
Home ಜಿಲ್ಲೆ ಹಾಸನಾಂಬ ವಿಶೇಷ ದರ್ಶನದ ಟಿಕೆಟ್ ಮಾರಾಟದಿಂದಲೇ 4.73 ಕೋಟಿ ರೂ. ಆದಾಯ!

ಹಾಸನಾಂಬ ವಿಶೇಷ ದರ್ಶನದ ಟಿಕೆಟ್ ಮಾರಾಟದಿಂದಲೇ 4.73 ಕೋಟಿ ರೂ. ಆದಾಯ!

ಹಾಸನ: ನಗರದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಭಾರಿ ಭಕ್ತ ಸಾಗರವೇ ಹರಿದು ಬರುತ್ತಿರುವುದರಿಂದ ಕೇವಲ ಐದು ದಿನಗಳಲ್ಲಿ ಟಿಕೆಟ್ ಮಾಟದಿಂದಲೇ 4.73 ಕೋಟಿ ರೂ. ದಾಖಲೆಯ ಆದಾಯ ಸಂಗ್ರಹವಾಗಿದೆ.

ಮಂಗಳವಾರ ಸಂಜೆ ಏಳು ಗಂಟೆವರೆಗೆ 300 ರೂ. 35270 ಟಿಕೆಟ್ ಗಳ ಮಾರಾಟದಿಂದ 1,05,81000ರೂ., 1000 ರೂ.ನ 32,915 ಟಿಕೆಟ್ ಗಳ ಮಾರಾಟದಿಂದ 3,29,15000 ರೂ. ಆದಾಯ ಬಂದಿದೆ.  ಟಿಕೆಟ್ ಮಾರಾಟದಿಂದಲೇ ಒಟ್ಟು 4,73,96000ರೂ. ಆದಾಯ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಮಾರುತಿ ತಿಳಿಸಿದ್ದಾರೆ.

error: Content is protected !!