0.9 C
Munich
Home News Politics ಸಿಎಂ ಬದಲಾವಣೆ ಹೇಳಿಕೆ; ವಿಜಯೇಂದ್ರಗೆ ಎಷ್ಟು ಗಂಟೆಯಲ್ಲಿ ಕನಸು ಬಿದ್ದಿತ್ತು ಎನ್ನುವುದು ನನಗೆ ಗೊತ್ತಿಲ್ಲ; ಕೆ.ಎಂ.ಶಿವಲಿಂಗೇಗೌಡ

ಸಿಎಂ ಬದಲಾವಣೆ ಹೇಳಿಕೆ; ವಿಜಯೇಂದ್ರಗೆ ಎಷ್ಟು ಗಂಟೆಯಲ್ಲಿ ಕನಸು ಬಿದ್ದಿತ್ತು ಎನ್ನುವುದು ನನಗೆ ಗೊತ್ತಿಲ್ಲ; ಕೆ.ಎಂ.ಶಿವಲಿಂಗೇಗೌಡ

ಹಿಂಬಾಗಿಲಿನಿಂದ ಆಪಾದನೆ ಮಾಡಿ ಸಿದ್ದರಾಮಯ್ಯ ಅವರನ್ನು ಇಳಿಸಿದ್ರೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಕುತಂತ್ರ, ಷಂಡ್ಯಂತ್ರ ಇದು ಎಂದ‌ ಶಿವಲಿಂಗೇಗೌಡ

ಹಾಸನ:ದಸರ ಮುಗಿಯುವುದರೊಳಗೆ ಸಿಎಂ ಬದಲಾವಣೆ ಆಗ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ವಿಜಯೇಂದ್ರಗೆ ಎಲ್ಲೋ‌ ರಾತ್ರಿ ಹೊತ್ತು ಕನಸು ಬಿದ್ದಿರಬೇಕು ಎಂದು ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಹೊತ್ತು ಮಲಗಿರುತ್ತಾನಲ್ಲಾ ಆಗ ಕನಸು ಬಿದ್ದಿದೆ. ಅದನ್ನು ಬಂದು ವಿಜಯೇಂದ್ರ ಹೇಳಿದ್ದಾನೆ. ಕನಸುಗಳು ನಿಜ ಆಗುವುದು ಕಷ್ಟ, ಯಾವತ್ತೂ ಕನಸುಗಳು ನಿಜ ಆಗಲ್ಲ ಎಂದು ಕಟಕಿಯಾಡಿದರು.

ಕನಸು ಕನಸಾಗಿಯೇ ಉಳಿಯುವುದು ಸ್ವಾಭಾವಿಕ. ಎಲ್ಲೋ ಒಂದೊಂದು ಮುಂಜಾನೆ ನಾಲ್ಕು, ಐದು ಗಂಟೆಯಲ್ಲಿ ಬೀಳುವ ಕನಸು‌ ನಿಜ ಆಗಬಹುದು. ಅವರಿಗೆ ಎಷ್ಟು ಗಂಟೆಯಲ್ಲಿ ಕನಸು ಬಿದ್ದಿದೆ ನನಗೆ ಗೊತ್ತಿಲ್ಲ ಎಂದರು.

error: Content is protected !!