ಹಾಸನ: ರಸ್ತೆ ಹಂಪ್ ಮೇಲೆ ವೇಗವಾಗಿ ಚಲಿಸಿದ ಬೈಕ್ ನಿಂದ ಆಯತಪ್ಪಿ ಬಿದ್ದು ಕರ್ತವ್ಯನಿರತ ಹೆಡ್‌ಕಾನ್ಸ್‌ಟೇಬಲ್ ಮೃತಪಟ್ಟ ಘಟನೆ ಅರಕಲಗೂಡು ತಾಲ್ಲೂಕಿನ ಜೋಡಿಗುಬ್ಬಿ ಕ್ರಾಸ್ ಬಳಿ ನಡೆದಿದೆ.
ಕೊಣನೂರು ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೆಂಟೇಶ್ (55) ಸಾವನ್ನಪ್ಪಿದ ಹೆಡ್‌ಕಾನ್ಸ್‌ಟೇಬಲ್.
ವ್ಯಕ್ತಿಯೊಬ್ಬನಿಗೆ ನ್ಯಾಯಾಲಯದ ಸಮನ್ಸ್ ನೀಡಿ ಬೈಕ್‌ನಲ್ಲಿ ಪೊಲೀಸ್ ಠಾಣೆಗೆ ವಾಪಸ್ಸಾಗುತ್ತಿದ್ದ ಮುಖ್ಯಪೇದೆ ವೆಂಕಟೇಶ್ ಅವರು ಜೋಡಿಗುಬ್ಬಿ ಕ್ರಾಸ್‌ನಲ್ಲಿ ಹಂಪ್ಸ್ ಮೇಲೆ ವೇಗವಾಗಿ ಚಲಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ಆಯತಪ್ಪಿ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದರು. ಸ್ಥಳಕ್ಕೆ ಅರಕಲಗೂಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










