ಹಾಸನ(kannadapost.com): ಕರ್ನಾಟಕ ರಾಜ್ಯಾದ್ಯಂತ ಶಿಕ್ಷಕರ ದಿನಾಚರಣೆ ಅಂಗವಾಗಿ ಯೋಗ ಸಾಧಕರು ಹಾಗೂ ಯೋಗ ಶಿಕ್ಷಕರ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಬಿರುದು ಪ್ರಶಸ್ತಿ ನೀಡಿ ಗೌರವಿಸುವ ಯೋಜನೆಯನ್ನು ಕಳೆದ ವರ್ಷದಿಂದ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಅದರಂತೆ, ಈ ಬಾರಿ ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಅಕ್ಟೋಬರ್ 25, 2026 ರಂದು ಭಾನುವಾರದಂದು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಹಾಸನ ಜಿಲ್ಲಾ ಯೋಗ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದ್ದಾರೆ.
ಆಯ್ಕೆಯಾಗಿರುವ ಪ್ರಶಸ್ತಿ ವಿಜೇತರು ಮೇಲ್ಕಂಡ ದಿನದಂದು ಅಪರಾಹ್ನ 1.00 ಗಂಟೆಯೊಳಗೆ ಸೂಚಿಸಿರುವ ಸ್ಥಳದಲ್ಲಿ ಹಾಜರಾಗಿ, ಮುಖ್ಯ ಸಂಯೋಜಕರಾದ ಶ್ರೀ ನಾಗೇಶ್ಗುರೂಜಿ (ಮೊಬೈಲ್ ಸಂಖ್ಯೆ: 9739294975) ಇವರಲ್ಲಿ ವರದಿ ಮಾಡಿಕೊಳ್ಳುವಂತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಐ. ನಿರಂಜನ್ ರಾಜ್ ಕೋರಿದ್ದಾರೆ.
ಬಿರುದು ಪ್ರಶಸ್ತಿ ವಿಜೇತರ ವಿವರ:
1. ಯೋಗಶ್ರೀ ವಿಭಾಗ:
- ಮಂಜುನಾಥ ಕೆ.ಬಿ. (ಹಾಸನ ತಾಲ್ಲೂಕು)
- ಪೋಣೇಶ್ (ಹಾಸನ ತಾಲ್ಲೂಕು)
- ಸುರೇಶ್ ಪ್ರಜಾಪತಿ (ಹಾಸನ ತಾಲ್ಲೂಕು)
- ಎಂ.ವಿ. ಗಿರೀಶ್ (ಹಾಸನ ತಾಲ್ಲೂಕು)
- ಪ್ರಶಾಂತ್ (ಸಕಲೇಶಪುರ)
- ದಾಮೋದರ (ಹಾಸನ ತಾಲ್ಲೂಕು)
- ತೇಜೇಶ್ (ಆಲೂರು ತಾಲ್ಲೂಕು)
- ಸಂಜಯ್ ಎಸ್. (ಬೇಲೂರು)
- ಹೇಮಂತ್ ಕುಮಾರ್ (ಅರಸೀಕೆರೆ)
- ಮಂಜುನಾಥ ಕೆ. (ಚನ್ನರಾಯಪಟ್ಟಣ)
2. ಯೋಗ ಜ್ಯೋತಿ (ಮಹಿಳೆಯರಿಗೆ) ವಿಭಾಗ:
- ಎನ್.ಎಸ್. ಶಾರದ
- ತೇಜ ರಾಜಶ್ರೀ
- ಸಂಧ್ಯಾ ಡಿ.
- ತುಳಸಿ ಎಂ.ವೈ.
- ರಮ್ಯ ಡಿ.ಜೆ.
- ನಾಗರತ್ನ
- ಮಂಜುಳ ಎಲ್.ಡಿ. (ಎಲ್ಲರೂ ಹಾಸನ ತಾಲ್ಲೂಕು)
- ಜ್ಯೋತಿ ನಂದೀಶ್ (ಚನ್ನರಾಯಪಟ್ಟಣ)
3. ಯೋಗರತ್ನ ವಿಭಾಗ:
- ಲಕ್ಷ್ಮೀ ರಂಗನಾಥ್
- ಜಗದೀಶ್ ಎಲ್.
- ಕೆ.ಎಂ. ಬಸವರಾಜ್
- ಕೆ.ಎಂ. ರುದ್ರಶೆಟ್ಟಿ (ಸಕಲೇಶಪುರ)
4. ಯೋಗ ಜೀವಮಾನ ಸಾಧನೆ (60 ವರ್ಷ ಮೇಲ್ಪಟ್ಟವರು) ವಿಭಾಗ:
- ಟಿ.ಪಿ. ಮಂಜುನಾಥ್
- ರಾಧಾ ತಿವಾರಿ (ಹಾಸನ ತಾಲ್ಲೂಕು)
- ಇಡುಪ್ರಸಾದ್ (ಆಲೂರು ತಾಲ್ಲೂಕು)
- ಪ್ರಭಾಕರ್ ಜಿ. (ಚನ್ನರಾಯಪಟ್ಟಣ)
- ಕೆ.ಎನ್. ರುದ್ರಯ್ಯ (ಬೇಲೂರು ತಾಲ್ಲೂಕು)
ಪ್ರಶಸ್ತಿ ಭಾಜನರಾದ ಎಲ್ಲಾ ಸಾಧಕರಿಗೂ ಹಾಸನ ಜಿಲ್ಲಾ ಯೋಗ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ: ಜಿ.ಐ. ನಿರಂಜನ್ ರಾಜ್ ಕಾರ್ಯದರ್ಶಿ, ಹಾಸನ ಜಿಲ್ಲಾ ಯೋಗ ಸಂಸ್ಥೆ (ರಿ.) ಹಾಸನ ಮೊಬೈಲ್: 9900839475












