ಹಾಸನ: ನಗರದ ಎಂ.ಜಿ. ರಸ್ತೆಯಲ್ಲಿರುವ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಲಯದಲ್ಲಿ 19 ವರ್ಷದ ಬಿ.ಕಾಂ ವಿದ್ಯಾರ್ಥಿನಿಯೊಬ್ಬರು ಮೃ*ತಪಟ್ಟಿರುವ ಘಟನೆ ಶನಿವಾರ ವರದಿಯಾಗಿದೆ.
ಮೃ*ತ ವಿದ್ಯಾರ್ಥಿನಿಯನ್ನು ಅರಕಲಗೂಡು ತಾಲೂಕಿನ ಹೊಡೆನೂರು ಗ್ರಾಮದ ಜಯಣ್ಣ ಅವರ ಪುತ್ರಿ ಲಕ್ಷ್ಮಿ ಹೆಚ್.ಜೆ. (19) ಎಂದು ಗುರುತಿಸಲಾಗಿದೆ. ಅವರು ಹಾಸನದ ಸೆಂಟ್ರಲ್ ಕಾಮರ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿಲಯದ ಕೊಠಡಿಯಲ್ಲಿ ಲಕ್ಷ್ಮಿ ಮೃ*ತಪಟ್ಟಿರುವುದು ಬೆಳಕಿಗೆ ಬಂದಿದ್ದು, ಕೊಠಡಿಯಲ್ಲಿ ಡೆತ್ನೋಟ್ ಪತ್ತೆಯಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಅದರಲ್ಲಿ ವೈಯಕ್ತಿಕ ನೋವು ಮತ್ತು ಜೀವನದ ಬಗ್ಗೆ ನಿರಾಶೆಯ ಭಾವನೆಗಳನ್ನು ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಆದರೆ ಘಟನೆಯ ಹಿಂದಿನ ನಿಖರ ಕಾರಣವನ್ನು ಪೊಲೀಸರು ದೃಢಪಡಿಸಬೇಕಿದೆ.
ಡೆ.*.ನೋಟ್ ನಲ್ಲಿ ಏನಿದೆ ?
“ಸಾರಿ ಅಮ್ಮ ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಆಗಲಿಲ್ಲ ಯಾರಿಗೂ ಯಾವತ್ತೂ ಮೋಸ ಮಾಡಲಿಲ್ಲ ಯಾರ ಕಣ್ಣಲ್ಲೂ ನೀರು ಹಾಕಿಸಿಲ್ಲ ಯಾರ ಹತ್ತಿರವೂ ಕಿತ್ತುಕೊಂಡು ತಿಂದಿಲ್ಲ ಅಮ್ಮ ಆದರೂ ಜೀವನ ತುಂಬಾ ಅನ್ಯಾಯ ಮಾಡಿಬಿಟ್ಟಿತು ಅಮ್ಮ ಮೆಂಟಲಿ ವೀಕ್ ಆಗಿಬಿಟ್ಟೆ ಅಮ್ಮ ಎಷ್ಟು ಟೈ ಮಾಡಿದರೂ ಬದುಕಲು ಆಗಲಿಲ್ಲ ನನ್ನ ಸ್ವಂತಕ್ಕೆ ಜೀವನಪೂರ್ತಿ ನಿನಗೆ ನೋವು ಕೊಟ್ಟು ಹೋಗುತ್ತಿದ್ದೇನೆ ಸಾರಿ ಅಪ್ಪಾಜಿ, ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡಿ ನನಗೆ ಬೇರೆ ದಾರಿ ತಿಳಿಯಲಿಲ್ಲ ತಮ್ಮ ನಿನ್ನ ಅಕ್ಕ ಕೆಟ್ಟವಳಲ್ಲ ಕಣೋ ಅಪ್ಪ-ಅಮ್ಮನ ಚೆನ್ನಾಗಿ ನೋಡಿಕೋ ನನ್ನ ಸಾವಿಗೆ ನಾನೇ ಕಾರಣ ಯಾರನ್ನೂ ಭೇಮ್ ಮಾಡೋದು ಬೇಡ. ಗುಡ್ ಬೈ….”
ಮಾಹಿತಿ ತಿಳಿದು ಸ್ಥಳಕ್ಕೆ ಹಾಸನ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ವಿದ್ಯಾರ್ಥಿನಿಯ ಸಾ*ವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸೂಚನೆ: ಸಾ*ವಿಗೆ ಕಾರಣವೇನು ಎಂಬುದು ತನಿಖೆಯಿಂದ ದೃಢಪಟ್ಟ ಬಳಿಕವೇ ಹೆಚ್ಚಿನ ವಿವರಗಳು ಸ್ಪಷ್ಟವಾಗಲಿವೆ.












