17.8 C
Munich
Home News Washinton:ವಾಷಿಂಗ್ಟನ್:ಟ್ರಂಪ್-ನೆತನ್ಯಾಹು ಹತ್ಯೆಗೆ 500 ಕೋಟಿ ಇನಾಮು? ಇರಾನ್ ಸಂಸತ್ತಿನಲ್ಲಿ ಸ್ಫೋಟಕ ಮಸೂದೆ!

Washinton:ವಾಷಿಂಗ್ಟನ್:ಟ್ರಂಪ್-ನೆತನ್ಯಾಹು ಹತ್ಯೆಗೆ 500 ಕೋಟಿ ಇನಾಮು? ಇರಾನ್ ಸಂಸತ್ತಿನಲ್ಲಿ ಸ್ಫೋಟಕ ಮಸೂದೆ!

ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ವಿರುದ್ಧ ಇರಾನ್ ಸಂಸತ್ತಿನಲ್ಲಿ ವಿವಾದಾತ್ಮಕ ಮಸೂದೆ ಕುರಿತು ತೋರಿಸುವ ಪ್ರತಿಕಾತ್ಮಕ ಚಿತ್ರ
ಟ್ರಂಪ್ ಮತ್ತು ನೆತನ್ಯಾಹು ವಿರುದ್ಧ 500 ಕೋಟಿಗೂ ಅಧಿಕ ಇನಾಮು ಘೋಷಿಸುವ ಮಸೂದೆ ತರಲು ಇರಾನ್ ಸಂಸತ್ತು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಹ*ತ್ಯೆಗೆ 500 ಕೋಟಿ ಬಹುಮಾನ ಘೋಷಿಸುವ ವಿಧೇಯಕವನ್ನು ಇರಾನ್ ಸಂಸತ್ತು ಸಿದ್ಧಪಡಿಸುತ್ತಿದೆ. ಈ ನಡುವೆ, ಅಮೆರಿಕ ಇರಾನ್ ಮೇಲಿನ ದಾಳಿಯನ್ನು ಮುಂದೂಡಿದೆ.

Washinton ಟೆಹ್ರಾನ್ / ವಾಷಿಂಗ್ಟನ್ ,ಮೇ,11,2026(www.kannadapost.com): ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಘಟ್ಟಕ್ಕೆ ಬಂದು ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹ*ತ್ಯೆ ಮಾಡುವವರಿಗೆ ಬರೋಬ್ಬರಿ 500 ಕೋಟಿ ರೂಪಾಯಿಗಿಂತಲೂ (50 ಮಿಲಿಯನ್ ಯುರೋ) ಅಧಿಕ ಮೊತ್ತದ ಬಂಪರ್ ಇನಾಮು ಘೋಷಿಸುವ ವಿವಾದಾತ್ಮಕ ವಿಧೇಯಕವನ್ನು (Bill) ತರಲು ಇರಾನ್ ಸಂಸತ್ತು ಭಾರಿ ಸಿದ್ಧತೆ ನಡೆಸುತ್ತಿದೆ. ಬ್ರಿಟನ್‌ನ ‘ದ ಟೆಲಿಗ್ರಾಫ್’ ವರದಿಯ ಪ್ರಕಾರ, ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯು ಈ ವಿಧೇಯಕದ ಕರಡು ಸಿದ್ಧಪಡಿಸುತ್ತಿದೆ. ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಮಾತನಾಡಿ, ಈ ವಿಧೇಯಕಕ್ಕೆ ‘ಇಸ್ಲಾಮಿಕ್ ರಿಪಬ್ಲಿಕ್‌ನ ಮಿಲಿಟರಿ ಮತ್ತು ಭದ್ರತಾ ಪಡೆಗಳ ಪ್ರತೀಕಾರದ ಕ್ರಮ’ ಎಂದು ಹೆಸರಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್ ಸಂಸದ ಮಹಮೂದ್ ನಬಾವಿಯನ್ ಈ ಕುರಿತು ಮಾಹಿತಿ ನೀಡಿ, “ಟ್ರಂಪ್ ಮತ್ತು ನೆತನ್ಯಾಹು ಅವರನ್ನು ನರಕಕ್ಕೆ ಕಳುಹಿಸುವವರಿಗೆ ಭಾರಿ ನಗದು ಬಹುಮಾನ ನೀಡುವ ಈ ಮಸೂದೆಯ ಮೇಲೆ ಸಂಸತ್ತು ಶೀಘ್ರದಲ್ಲೇ ಮತದಾನ ನಡೆಸಲಿದೆ” ಎಂದು ಹೇಳಿದ್ದಾರೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ದೇಶದ ಪ್ರಮುಖ ಸೇನಾ ಮತ್ತು ರಾಜಕೀಯ ನಾಯಕರ ಸಾವಿಗೆ ಅಮೆರಿಕ ಮತ್ತು ಇಸ್ರೇಲ್ ಕಾರಣ ಎಂದು ಆರೋಪಿಸಿ ಇರಾನ್ ಈ ತೀವ್ರ ಸ್ವರೂಪದ ನಿರ್ಧಾರಕ್ಕೆ ಬಂದಿದೆ. ಇರಾನ್ ಪ್ರಕಾರ, ಕಳೆದ ಫೆಬ್ರವರಿಯಲ್ಲಿ ನಡೆದ ಜಂಟಿ ದಾಳಿಗೆ ಟ್ರಂಪ್, ನೆತನ್ಯಾಹು ಮತ್ತು ಯುಎಸ್ ಸೆಂಟ್ರಲ್ ಕಮಾಂಡ್‌ನ ಅಡ್ಮಿರಲ್ ಬ್ರಾಡ್ ಕೂಪರ್ ಅವರೇ ನೇರ ಹೊಣೆಗಾರರಾಗಿದ್ದಾರೆ.

ಮಂಗಳವಾರದ ಭೀಕರ ದಾಳಿ ಮುಂದೂಡಿದ ಟ್ರಂಪ್

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಇರಾನ್ ಮೇಲೆ ಮಂಗಳವಾರ ನಡೆಸಲು ಯೋಜಿಸಲಾಗಿದ್ದ ಬೃಹತ್ ಮಿಲಿಟರಿ ದಾಳಿಯನ್ನು ಸದ್ಯಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಗಲ್ಫ್ ದೇಶಗಳ ನಾಯಕರು ಮಧ್ಯಸ್ಥಿಕೆ ವಹಿಸಿ, ಶಾಂತಿ ಮಾತುಕತೆಗೆ ಮತ್ತೊಂದು ಅವಕಾಶ ನೀಡುವಂತೆ ಕೆಲವು ದಿನಗಳ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

error: Content is protected !!