13.2 C
Munich
Home News Bangladesh:ಢಾಕಾ/ಇಸ್ಲಾಮಾಬಾದ್ತ: ತರಬೇತಿಗಾಗಿ ಬಾಂಗ್ಲಾದೇಶ (Bangladesh) ಅಧಿಕಾರಿಗಳು ಪಾಕಿಸ್ತಾನಕ್ಕೆ; ದಕ್ಷಿಣ ಏಷ್ಯಾದಲ್ಲಿ ಹೊಸ ರಾಜತಾಂತ್ರಿಕ ಸಮೀಕರಣ?

Bangladesh:ಢಾಕಾ/ಇಸ್ಲಾಮಾಬಾದ್ತ: ತರಬೇತಿಗಾಗಿ ಬಾಂಗ್ಲಾದೇಶ (Bangladesh) ಅಧಿಕಾರಿಗಳು ಪಾಕಿಸ್ತಾನಕ್ಕೆ; ದಕ್ಷಿಣ ಏಷ್ಯಾದಲ್ಲಿ ಹೊಸ ರಾಜತಾಂತ್ರಿಕ ಸಮೀಕರಣ?

ಪಾಕಿಸ್ತಾನದಲ್ಲಿ ತರಬೇತಿ ಪಡೆಯುತ್ತಿರುವ ಬಾಂಗ್ಲಾದೇಶದ ಹಿರಿಯ ಅಧಿಕಾರಿಗಳ ತಂಡ
1971ರ ಬಳಿಕ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಬಾಂಗ್ಲಾದೇಶ ಅಧಿಕಾರಿಗಳಿಗೆ ಅಧಿಕೃತ ತರಬೇತಿ

Bangladesh,ಢಾಕಾ/ಇಸ್ಲಾಮಾಬಾದ್, ಮೇ 7,(www.kannadapost.com): Bangladesh ದೀರ್ಘಕಾಲದ ರಾಜಕೀಯ ಮತ್ತು ಇತಿಹಾಸಾತ್ಮಕ ಭಿನ್ನಾಭಿಪ್ರಾಯಗಳ ಬಳಿಕ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಹೊಸ ತಿರುವು ಪಡೆಯುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಈ ಬೆಳವಣಿಗೆಯ ಭಾಗವಾಗಿ ಬಾಂಗ್ಲಾದೇಶ ಸರ್ಕಾರ ತನ್ನ ಹಿರಿಯ ಅಧಿಕಾರಿಗಳ ನಿಯೋಗವನ್ನು ತರಬೇತಿಗಾಗಿ ಪಾಕಿಸ್ತಾನಕ್ಕೆ ಕಳುಹಿಸಿದೆ.

ಮೂಲಗಳ ಪ್ರಕಾರ, 1971ರ ನಂತರ ಇದೇ ಮೊದಲ ಬಾರಿಗೆ ಬಾಂಗ್ಲಾದೇಶದ ಹಿರಿಯ ಅಧಿಕಾರಿಗಳಿಗೆ ಪಾಕಿಸ್ತಾನದಲ್ಲಿ ಅಧಿಕೃತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು 12 ಮಂದಿ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಆಡಳಿತ ವ್ಯವಸ್ಥೆ, ನೀತಿ ಅನುಷ್ಠಾನ ಹಾಗೂ ಸಾರ್ವಜನಿಕ ಸೇವಾ ನಿರ್ವಹಣೆ ಕುರಿತ ತರಬೇತಿ ನೀಡಲಾಗುತ್ತಿದೆ.

ಈ ಸಂಪೂರ್ಣ ತರಬೇತಿ ಕಾರ್ಯಕ್ರಮಕ್ಕೆ ಪಾಕಿಸ್ತಾನವೇ ವೆಚ್ಚ ಭರಿಸುತ್ತಿದೆ ಎಂದು ವರದಿಯಾಗಿದೆ. ಇತ್ತೀಚಿನ ರಾಜಕೀಯ ಬದಲಾವಣೆಗಳ ನಂತರ ಎರಡು ದೇಶಗಳ ನಡುವಿನ ಸಂಪರ್ಕ ಮತ್ತು ಸಂವಾದ ಹೆಚ್ಚುತ್ತಿರುವ ಹಿನ್ನೆಲೆ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ದಕ್ಷಿಣ ಏಷ್ಯಾದ ರಾಜಕೀಯ ಪರಿಸ್ಥಿತಿಯಲ್ಲಿ ಈ ಬೆಳವಣಿಗೆಯನ್ನು ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಿ ವಿಶ್ಲೇಷಿಸಲಾಗುತ್ತಿದೆ. ಶಿಕ್ಷಣ, ಆಡಳಿತ ಹಾಗೂ ಕೌಶಲ್ಯ ವಿನಿಮಯದ ಮೂಲಕ ಎರಡೂ ದೇಶಗಳು ಸಹಕಾರವನ್ನು ವಿಸ್ತರಿಸಲು ಮುಂದಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕೆಲವು ವಿದೇಶಾಂಗ ವಿಶ್ಲೇಷಕರು, “ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಹಕಾರವು ರಾಜಕೀಯ ಅಂತರವನ್ನು ಕಡಿಮೆ ಮಾಡಲು ನೆರವಾಗಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಬಾಂಗ್ಲಾದೇಶದ ಒಳರಾಜಕೀಯದಲ್ಲಿ ಈ ನಿರ್ಧಾರ ಕುರಿತು ಚರ್ಚೆಯೂ ಆರಂಭವಾಗಿದೆ.

error: Content is protected !!