9 C
Munich
Home ಜಿಲ್ಲೆ ಹಾಸನ ಅಗ್ಗುಂದ ಗ್ರಾಮದಲ್ಲಿ ಮನೆಗೆ ಗುದ್ದಿದಕೆಎಸ್‌ಆರ್‌ಟಿಸಿ ಬಸ್

ಅಗ್ಗುಂದ ಗ್ರಾಮದಲ್ಲಿ ಮನೆಗೆ ಗುದ್ದಿದಕೆಎಸ್‌ಆರ್‌ಟಿಸಿ ಬಸ್

ಅರಸೀಕೆರೆ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಮನೆಗೆ ನುಗ್ಗಿದ ಘಟನೆ ತಾಲೂಕಿನ ಅಗ್ಗುಂದ ಗ್ರಾಮದಲ್ಲಿ ನಡೆದಿದೆ.
ಅರಸೀಕೆರೆಯಿಂದ ಹುಳಿಯಾರು ಕಡೆಗೆ ಹೋಗುತ್ತಿದ್ದ ಬಸ್, ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ನುಗ್ಗಿದೆ. ಇದರಿಂದ ಮನೆ ಮುಂದಿನ ಗೋಡೆ ಕುಸಿದಿದ್ದು, ಅದರ ಮೇಲಿದ್ದ ನೀರಿನ ಸಿಂಟೆಕ್ ಒಡೆದು ಹೋಗಿ ನೀರು ಸುರಿಯುತ್ತಿತ್ತಿ. ಡಿಕ್ಕಿ ರಭಸಕ್ಕೆ ಬಸ್‌ನ ಮುಂಭಾಗ ಭಾಗಶಃ ಜಖಂಗೊAಡಿದ್ದು, ಮುಂದಿನ ಗಾಜು ಪುಡಿಪುಡಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರ ಪೈಕಿ ನಾಲ್ಕೆöÊದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದೃಶ್ಯಾವಳಿ ನೋಡಲು ಸ್ಥಳೀಯರು ಜಮಾಯಿಸಿದ್ದರು.
ಗ್ರಾಮಾಂತರ ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!