10 C
Munich
Home News ಯಮಕನಮರಡಿ: ಪ್ರಿಯಕರನ ಜೊತೆ ಓಡಿಹೋದ ಯುವತಿ ಹತ್ಯೆ: ಕುಟುಂಬಸ್ಥರಿಂದಲೇ ಕೊಲೆ, ಶವ ಸುಟ್ಟು ಸಾಕ್ಷಿ ನಾಶ!

ಯಮಕನಮರಡಿ: ಪ್ರಿಯಕರನ ಜೊತೆ ಓಡಿಹೋದ ಯುವತಿ ಹತ್ಯೆ: ಕುಟುಂಬಸ್ಥರಿಂದಲೇ ಕೊಲೆ, ಶವ ಸುಟ್ಟು ಸಾಕ್ಷಿ ನಾಶ!

ಯುವತಿ ಹತ್ಯೆ ಪ್ರಕರಣ – ಕುಟುಂಬಸ್ಥರಿಂದ ಕೊಲೆ ಆರೋಪ

ಯಮಕನಮರಡಿ ,ಏಪ್ರಿಲ್,14,2026(www.kannadapost.com): ಪ್ರಿಯಕರನೊಂದಿಗೆ ಓಡಿಹೋಗಿ ಕುಟುಂಬದ ಮಾನ ಹರಾಜು ಹಾಕಿದಳೆಂಬ ಆರೋಪದ ಮೇಲೆ ಯುವತಿಯನ್ನು ಕುಟುಂಬಸ್ಥರೇ ಹತ್ಯೆ ಮಾಡಿ, ಬಳಿಕ ಶವ ಸುಟ್ಟು ಸಾಕ್ಷಿ ನಾಶಪಡಿಸಿದ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಮಾ.13ರಂದು ನಡೆದಿದ್ದು, ಇದೀಗ ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲಗಳ ಪ್ರಕಾರ, ಘಟನೆ ಮಹಾರಾಷ್ಟ್ರದ ಮಿರಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹೆಳವಿ (24) ಹತ್ಯೆಗೀಡಾದ ಯುವತಿ. ಪ್ರಕರಣ ಸಂಬಂಧ ಹುಕ್ಕೇರಿ ತಾಲೂಕಿನ ನದಿ ಗುಡಿಕ್ಷೇತ್ರ ಗ್ರಾಮದ ಪ್ರಕಾಶ ಹೆಳವರ (ಚಿಕ್ಕಪ್ಪ), ಶ್ಯಾನೂರ ಹೆಳವರ (ಸಹೋದರ) ಹಾಗೂ ಮೊರಬದ ಗ್ರಾಮದ ಕಲ್ಲಪ್ಪ (ಸಹೋದರಿಯ ಪತಿ) ಅವರನ್ನು ಪೊಲೀಸರು ಬಂಧಿಸಿದ್ದಾರೆ.

🔍 ಏನಿದು ಪ್ರಕರಣ?

ಸತ್ಯವ್ವಳನ್ನು ಸಂತೋಷ ಹೆಳವಿ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಪತಿಯೊಂದಿಗೆ ಜೀವನ ನಡೆಸದೇ, ಕೃಷ್ಣಾ ಪಾಟೀಲ (28) ಎಂಬ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಈ ಕುರಿತು ಕಾಣೆಯಾದ ಪ್ರಕರಣವೂ ದಾಖಲಾಗಿತ್ತು.

ನಂತರ ಯುವತಿಯನ್ನು ಪತ್ತೆ ಹಚ್ಚಿದ ಕುಟುಂಬಸ್ಥರು, ಮಹಾರಾಷ್ಟ್ರದ ಮಿರಜ್ ಪ್ರದೇಶದಲ್ಲಿ ಆಕೆಯನ್ನು ಹತ್ಯೆ ಮಾಡಿ, ಶವವನ್ನು ಸುಟ್ಟು ಸಾಕ್ಷಿ ನಾಶಪಡಿಸಿರುವ ಆರೋಪ ಕೇಳಿಬಂದಿದೆ.

⚖️ ಪ್ರಕರಣದ ಮುಂದಿನ ಬೆಳವಣಿಗೆ

ಈ ಪ್ರಕರಣವನ್ನು ಮಹಾರಾಷ್ಟ್ರದ ಸಂಬಂಧಿತ ಪೊಲೀಸ್ ಠಾಣೆಗೆ ವರ್ಗಾಯಿಸಲು ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆ ಮತ್ತೆ ‘ಆನರ್ ಕಿಲ್ಲಿಂಗ್’ (ಗೌರವ ಹತ್ಯೆ) ಪ್ರಕರಣಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

error: Content is protected !!