Hassan📰 “ಅನ್ಯಾಯ ನಡೆದರೆ ಕಣ್ಮುಚ್ಚಿ ಕುಳಿತುಕೊಳ್ಳಲ್ಲ, ಯಾವ ಅಧಿಕಾರಿಗೂ ಕಿರುಕುಳ ಕೊಟ್ಟಿಲ್ಲ”: ಶ್ರೇಯಸ್ ಪಟೇಲ್ ಆರೋಪಕ್ಕೆ ರೇವಣ್ಣ ತಿರುಗೇಟು

Hassan ಹಾಸನ | ಕನ್ನಡಪೋಸ್ಟ್ ವರದಿ

 ಹೊಳೆನರಸೀಪುರದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದು, ಅಧಿಕಾರಿಗಳಿಗೆ ಕಿರುಕುಳ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.


“ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಬೇಕು”

“ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಬೇಕು ಅಷ್ಟೇ. ಒಳ್ಳೆಯ ಕೆಲಸ ಮಾಡಿದರೆ ನಾವು ಬೇಷ್ ಅಂತೇವೆ. ಆದರೆ ಲೂಟಿ ಮಾಡಿದರೆ ಏನು ಮಾಡಬೇಕು?” ಎಂದು ಪ್ರಶ್ನಿಸಿದರು.


“ಅಸೆಂಬ್ಲಿಯಲ್ಲಿ ಮಾತನಾಡದೆ ಏನು ಮಾಡಲಿ?”

“ಈ ಜಿಲ್ಲೆಯಲ್ಲಿ ಅನ್ಯಾಯ ನಡೆಯುತ್ತಿದ್ದರೆ ನಾನು ಕಣ್ಮುಚ್ಚಿ ಕುಳಿತುಕೊಳ್ಳಲಾ? ಅಸೆಂಬ್ಲಿಯಲ್ಲಿ ವಿಷಯ ಮಾತನಾಡದೆ ಏನು ಮಾಡಲಿ?” ಎಂದು ರೇವಣ್ಣ ಹೇಳಿದರು.

“ನಾನು ಈಗ ಮಂತ್ರಿನಾ? ನಮ್ಮ ಸರ್ಕಾರ ಇದೆಯಾ? ನಾನು ಏಕೆ ಕಿರುಕುಳ ಕೊಡಲಿ? ಒಬ್ಬ ಶಾಸಕನಾಗಿ ನನ್ನ ಕರ್ತವ್ಯ ಮಾಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.


“ಹಾಸನಾಂಬ ಜಾತ್ರೆ ಬಗ್ಗೆ ತನಿಖೆ”

ಹಾಸನಾಂಬ ಜಾತ್ರೆ ವಿಚಾರವಾಗಿ ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ ಅವರು,
“ಜಿಲ್ಲಾಧಿಕಾರಿ ಒಬ್ಬ ಶಾಸಕರಿಗೆ ಅಗೌರವ ತಂದಿದ್ದಾರೆ” ಎಂದು ಆರೋಪಿಸಿದರು.


“ಜಾತ್ರೆಯಲ್ಲಿ ಗಲಾಟೆ ಯತ್ನ”

“ ಹೊಳೆನರಸೀಪುರ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆಯಲ್ಲಿ ಕೆಲವರು ಗಲಾಟೆ ಮಾಡಿಸಬೇಕೆಂದುಕೊಂಡಿದ್ದರು. ಬಟ್ಟೆ ಅಲಂಕಾರ ಮಾಡದೆ ಬೋಳಾಗಿ ತೇರು ಎಳೆಸಿದರು” ಎಂದು ಆರೋಪಿಸಿದರು.


“ಬಡವರಿಗೆ ಟೋಪಿ ಹಾಕಿದ್ರೆ?”

“ನನ್ನನ್ನು ಮೀಟಿಂಗ್‌ಗೆ ಏಕೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ? ಬಡವರಿಗೆ ಟೋಪಿ ಹಾಕಿದ್ರೆ ನಾವು ಏನ್ ಮಾಡೋಣ?” ಎಂದು ಪ್ರಶ್ನಿಸಿದರು.


ಶ್ರೇಯಸ್ ಪಟೇಲ್ ಆರೋಪಕ್ಕೆ ಪ್ರತಿಕ್ರಿಯೆ

ಸಂಸದ ಶ್ರೇಯಸ್ ಪಟೇಲ್ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ ರೇವಣ್ಣ,
“ಅಧಿಕಾರಿಗಳಿಗೆ ಕಿರುಕುಳ ಕೊಡುವ ಉದ್ದೇಶವೇ ಇಲ್ಲ” ಎಂದು ಸ್ಪಷ್ಟಪಡಿಸಿದರು.