ಟ್ರಾಫಿಕ್ ಸುಧಾರಣೆಗೆ ಒತ್ತು: ರೌಡಿಸಂ-ಅಕ್ರಮ ಚಟುವಟಿಕೆ ಅವಕಾಶ ಇಲ್ಲ: ನೂತನ ಎಸ್ಪಿ ಖಡಕ್ ಎಚ್ಚರಿಕೆ

ಮಹಿಳಾ-ಮಕ್ಕಳ ರಕ್ಷಣೆ ಮೊದಲ ಹೊಣೆ

ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನೀಡಿದ ಸ್ವಾಗತ ಸ್ವೀಕರಿಸಿದ ನೂತನ ಎಸ್ಪಿ

ಹಾಸನ: ತಮ್ಮ ಅಧಿಕಾರಾವಧಿಯಲ್ಲಿ ಮಹಿಳಾ-ಮಕ್ಕಳ ರಕ್ಷಣೆ ಮೊದಲ ಆದ್ಯತೆ ನೀಡಲಾಗುವುದು ಎಂದು ನೂತನ ಎಸ್ಪಿ ಮೊಹಮದ್ ಸುಜೀತಾ ಹೇಳಿದರು.
ನಗರದ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನೀಡಿದ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಟ್ರಾಫಿಕ್ ಸುಧಾರಣೆಗೆ ಒತ್ತು ನೀಡಲಾಗುವುದು. ಮಹಿಳೆಯರು, ಮಕ್ಕಳ ರಕ್ಷಣೆ ವಿಚಾರದಲ್ಲಿ ನನ್ನದೇ ಆದ ಕೆಲ ಯೋಜನೆಗಳಿದ್ದು, ಹಂತ ಹಂತವಾಗಿ ಅವುಗಳನ್ನು ಅನುಷ್ಠಾನ ಮಾಡಲಾಗುವುದು. ಅದಕ್ಕಾಗಿ ಸ್ವಲ್ಪ ಸಮಯಾವಕಾಶ ಬೇಕು ಎಂದರು.
ಬದಲಾವಣೆ ಉದ್ದೇಶ: ಹಾಗೆಯೇ ಟ್ರಾಫಿಕ್ ಸುಧಾರಣೆಗೆ ನಿಗಾ ವಹಿಸಲಾಗುವುದು ಎಂದ ಅವರು, ಸಂಚಾರ ದಟ್ಟಣೆ, ನಿಯಮ ಪಾಲನೆ, ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡೋ ಉದ್ದೇಶ ಇದೆ, ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.
ರೌಡಿಸಂಗೆ ಎಡೆಯಿಲ್ಲ:
ಇದೇ ವೇಳೆ ರೌಡಿಸಂ-ಗೂAಡಾಯಿಸA ಹಾಗೂ ಅಕ್ರಮ ಚಟುವಟಿಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವಾರ್ನಿಂಗ್ ಮಾಡಿದರು. ರೌಡಿಸಂ ಮೂಲಕ ಜನರಿಗೆ ತೊಂದರೆ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಹಾಗೆಯೇ ಗುಂಡಾಯಿಸA ತಡೆ, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕು ಒತ್ತು ನೀಡಲಾಗುವುದು. ಒಟ್ಟಿನಲ್ಲಿ ಜನರು ಶಾಂತಿಯಿAದ ಜೀವನ ನಡೆಸಬೇಕು. ಅದಕ್ಕಾಗಿ ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಅಕ್ರಮ ಚಟುವಟಿಕೆ ಸಹಿಸಲ್ಲ ಎಂದ ಅವರು, ಎಲ್ಲೇ ತಪ್ಪು ನಡೆದರೂ ತಮಗೆ ಮಾಹಿತಿ ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಎಲ್ಲೆ ಅಪರಾಧ, ದೌರ್ಜನ್ಯ ಪ್ರಕರಣ ನಡೆದರೂ ಮೊದಲು ಎಫ್‌ಐಆರ್ ಆಗಬೇಕು. ನೊಂದವರಿಗೆ ನ್ಯಾಯ ಕೊಡಿಸಬೇಕು ಎಂಬುದು ನನ್ನ ಮೊದಲ ಗಮನ ಎಂದರು. ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರುಗಳಿಗೆ ಸರಿಯಾಗಿ ಸ್ಪಂದಿಸದೇ ಇದ್ದರೆ ನನ್ನ ಸೇರಿದಂತೆ ಎಲ್ಲಾ ಅಧಿಕಾರಿಗಳ ನಂಬರ್ ಡಿಸ್ಪೆ÷್ಲÃ ಮಾಡಲಾಗಿದೆ ಎಂದು ಹೇಳಿದರು.
ಪೊಲೀಸರು ಸ್ಪಂದಿಸದೇ ಇದ್ದರೆ ಕಾಲ್ ಮಾಡಿ, ನನ್ನ ಆದ್ಯತೆ ಎಂದರೆ ಜನಸ್ಮೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡುವುದು ಎಂದರು.
ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ, ನಿಮ್ಮಲ್ಲಿ ಎಲ್ಲಾ ಸಂದರ್ಭ ನಿಭಾಯಿಸುವ ಶಕ್ತಿ ಇದೆ. ನಮ್ಮಿಂದ ನಿಮಗೆ ಎಲ್ಲಾ ರೀತಿಯ ಸಹಕಾರ ಸಿಗಲಿದೆ. ಹಾಸನಾಂಬ ಜಾತ್ರೆ ವೇಳೆ ಮಾಧ್ಯಮದವರಿಗೆ ಎಲ್ಲಾ ರೀತಿಯ ಸಹಕಾರ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ಬಿ. ಮದನಗೌಡ, ಯಾವುದೇ ಎಸ್ಪಿ ಜಿಲ್ಲೆಗೆ ಬಂದಾಗ, ಹೋದಾಗ ಅವರನ್ನು ನಮ್ಮ ಸಂಘಕ್ಕೆ ಆಹ್ವಾನಿಸಿ ಸ್ವಾಗತಿಸುವುದು, ಬೀಳ್ಕೊಡುವುದು ನಾವು ಬೆಳೆಸಿಕೊಂಡು ಬಂದಿರುವ ಪರಿಪಾಟ ಎಂದರು. ಅಧಿಕಾರಿಗಳು ಜಿಲ್ಲೆಗೆ ಬರುವಾಗ ಎಲ್ಲವನ್ನು ತಿಳಿದುಕೊಂಡೇ ಬರುತ್ತಾರೆ. ನಂತರ ಇಲ್ಲಿಯ ಕೆಲಸ, ವಾತಾವರಣ ನೋಡಿ ಖಂಡಿತಾ ಇಷ್ಟ ಪಡುತ್ತಾರೆ. ಹಾಸನದ ವಿಶೇಷ ಎಂದರೆ ಇಲ್ಲಿ ನಿಮಗೆ ಸೌಹಾರ್ದ ಸಂಬAಧ ಸಿಗಲಿದ್ದು, ಸಂಬAಧ ಪ್ರೀತಿ ಸದಾ ಇರಲಿದೆ ಎಂದರು. ಈ ಬಾರಿಯ ಹಾಸನಾಂಬ ದರ್ಶನ ಸಾಂಗವಾಗಿ ನಡೆಯಲಿ,
ಹಿಂದಿನ ಅಧಿಕಾರಿಗಳಂತೆ ನೀವೂ, ಮಾಧ್ಯಮದವರಿಗೆ ಉತ್ತಮ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು. ಏನಾದರೂ ಬದಲಾವಣೆ ಇದ್ದರೆ ಚರ್ಚೆ ಮಾಡಿ ಏಕೆಂದರೆ ನಿಮ್ಮ ಐಡಿಯಾ ಬೇರೆ ಇರಲಿದೆ. ನಿಮ್ಮ ಕಾರ್ಯವೈಖರಿ ಎಲ್ಲರಿಗೂ ಮೆಚ್ಚುಗೆಯಾಗಲಿ, ಜಿಲ್ಲೆಯ ಸಮಸ್ತ ಪತ್ರಕರ್ತರ ಸಹಕಾರ ನಿರಂತರ ಇರಲಿದೆ, ಪ್ರೀತಿ, ಸೌಹಾರ್ದ ಮುಂದುವರಿಸಿಕೊAಡು ಹೋಗಿ ಎಂದರು. ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ ಸ್ವಾಗತಿಸಿ, ನಿರೂಪಿಸಿದರು.

ಹೇಳಿಕೆ:
ಹಿಂದಿನ ಎಸ್ಪಿ ಅವರು ಚಾಲೂ ಮಾಡಿದ್ದ ಕೆಲಸ ಕಾರ್ಯ ಮುಂದು ವರಿಸಲಾಗುವುದು. ಮಿಸ್ಸಿಂಗ್ ಕೇಸ್ ಪತ್ತೆ ಕಾರ್ಯಾಚರಣೆ ಮುಂದುವರಿಯ ಲಿದೆ. ನಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ಮಾಧ್ಯಮದವರು ಸೇರಿ ಎಲ್ಲರ ಸಹಕಾರ ಕೋರುವೆ. ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೧ ಗಂಟೆವರೆಗೂ ಸಾರ್ವಜನಿಕರೂ ತಮ್ಮನ್ನು ಭೇಟಿ ಮಾಡಬಹುದು. ಹಾಸನಾಂಬ ಜಾತ್ರೆಯಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು.
-ಮೊಹಮದ್ ಸಜೀತಾ, ಎಸ್ಪಿ