13.5 C
Munich
Home News Politics ಜೆಡಿಎಸ್‌ನವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರೋದು: ನಮಗವರು ನೆಂಟರು ಎಂದ ಮಾಜಿ ಶಾಸಕ ಪ್ರೀತಂಗೌಡ

ಜೆಡಿಎಸ್‌ನವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರೋದು: ನಮಗವರು ನೆಂಟರು ಎಂದ ಮಾಜಿ ಶಾಸಕ ಪ್ರೀತಂಗೌಡ

ಅವರನ್ನು ನಾವು ಸತ್ಕಾರ ಮಾಡುತ್ತೇವೆ: ನಮ್ಮ ಸಿದ್ಧಾಂತಕ್ಕೆ ಅವರು ಹೊಂದಿಕೊAಡು ಹೋಗಬೇಕು ಎಂದ ಮಾಜಿ ಶಾಸಕ ಪ್ರೀತಂಗೌಡ

ಮಾಜಿ ಶಾಸಕ ಪ್ರೀತಂಗೌಡ

ಹಾಸನ: ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ ಅವರು ನಮ್ಮ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಂದಿರುವÀ ನೆಂಟರು ಯಾರು ಮನೆಯಲ್ಲಿ ಇರ್ತಾರೆ ಅವರ ತತ್ವ, ಸಿದ್ಧಾಂತ, ರಾಷ್ಟಿçÃಯತೆ ಎಲ್ಲಾ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟಿçÃಯ ಪಕ್ಷ, ೩೦೩ ಸಂಸದ ಸ್ಥಾನ ಗೆದ್ದಿದೆ. ನಮ್ಮ ಹತ್ತಿರ ಒಂದು ಸೀಟ್ ಇರುವವರು ಬಂದಿದ್ದಾರೆ. ನಮ್ಮದು ರಾಷ್ಟಿçÃಯತೆ, ದೇಶ ಮೊದಲು ವ್ಯಕ್ತಿ ಕೊನೆ ಎಂಬುದು ನಮ್ಮ ಅಜೆಂಡಾ. ಇದನ್ನೆಲ್ಲಾ ಒಪ್ಪಿಕೊಂಡು ಬಂದಿದ್ದಾರೆ ಎಂದರು.
ನಮ್ಮಲ್ಲಿ ವಂಶಪಾರAಪಾರಿಕ ಆಡಳಿತಕ್ಕೆ ಅವಕಾಶ ಇರುವುದಿಲ್ಲ. ನಮ್ಮಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇರುವುದಿಲ್ಲ. ಅದನ್ನು ಮನದಟ್ಟು ಮಾಡಿಕೊಂಡು, ನರೇಂದ್ರಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕೆಂದು ಬಂದಿರುವುದು ಸ್ವಾಗತ ಮಾಡುವ ವಿಚಾರ ಎಂದು ಕುಟುಕಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ನನ್ನ ಬದಲಿಗೆ ಬೇರೆಯವರಿಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆನಾಗುವುದೋ ಕಾದು ನೋಡೋಣ ಎಂದರು.
ನಮ್ಮ ಆಚಾರ, ವಿಚಾರ ಅವರು ಒಪ್ಪಿಕೊಳ್ಳಲಿ, ನಮ್ಮ ಜೊತೆ ಬಂದಿರುವ ಅವರೇ ಫ್ರೆಂಡ್ಲಿಯಾಗಿ ಇರಬೇಕು. ನಮ್ಮ ಮನೆಗೆ ಬಂದಿರುವ ಗೆಸ್ಟ್ಗೆ ಕಾಫಿ, ಟೀ, ಊಟಾನೂ ಕೊಡ್ತೀವಿ. ನಾವು ಕೊಡುವ ಮೆನು ಊಟ ಮಾಡಬೇಕಷ್ಟೇ. ಅವರು ನನಗೆ ಇದೇ ಬೇಕು, ಅದೇ ಬೇಕು ಅಂತ ಹೇಳಂಗಿಲ್ಲ. ಬಂದಿರೋದು ನಮ್ಮ ಮನೆಗೆ, ರಾಷ್ಟಿçÃಯ ನಾಯಕರು ಹೇಳಿದ್ದಾರೆ ಗೆಸ್ಟ್ನ ಒಳ್ಳೆಯ ರೀತಿ ನೋಡಿಕೊಳ್ಳುತ್ತೇವೆ. ಅತಿಥಿ ಸತ್ಕಾರ ಮಾಡುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದರು.

ಶಿವಮೊಗ್ಗ ಗಲಾಟೆ ಪ್ರಕರಣದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರೀತಂ, ಮಂತ್ರಿಗಳಿಗೆ ಯಾರು ಫೀಡ್‌ಬ್ಯಾಕ್ ಕೊಡ್ತಾರೋ, ಅವರ ಮನಸ್ಥಿತಿ ಏನಿದೆಯೋ ಗೊತ್ತಿಲ್ಲ. ಪರಿಸ್ಥಿತಿ ತಿಳಿಗೊಳಿಸುವ ಬದಲು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುವುದು ಸರಿಯಲ್ಲ. ರಾಮಲಿಂಗಾರೆಡ್ಡಿ ಅವರ ಹೇಳಿಕೆ ಖಂಡನೀಯ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು,
ಬರಗಾಲ ಎರಡು ಮೂರು ವರ್ಷ ಸತತವಾಗಿರುತ್ತೆ. ಆದರೆ ನಾವು ಈ ವರ್ಷ ಎಷ್ಟು ನೀರು ಬೇಕು ಅಂತ ತಮಿಳುನಾಡು ಜೊತೆ ವಾದ ಮಾಡ್ತಿದ್ದೀವಿ. ಮುಂದಿನ ಎರಡು ಮೂರು ವರ್ಷಕ್ಕೆ ಕುಡಿಯುವ ನೀರಿಗೆ ಸಮಸ್ಯೆ ತಲೆದೋರದ ರೀತಿಯಲ್ಲಿ ಎಷ್ಟು ಟಿಎಂಸಿ ನೀರುವ ಬೇಕು ಎನ್ನುವ ಅಂಕಿ ಅಂಶವನ್ನು ಕೋರ್ಟ್ಗೆ ತಿಳಿಸಬೇಕು. ಮುಂದಿನ ವರ್ಷ ಮಳೆ ಬರುತ್ತೆ ಅಂತಾ ಯಾರಾದರೂ ಸರ್ಕಾರಕ್ಕೆ ಬರೆದುಕೊಟ್ಟಿದ್ದಾರಾ, ಸರ್ಕಾರಕ್ಕೆ ಮಾಹಿತಿ ಇದೆಯಾ. ಯಾವತ್ತೂ ಕೂಡ ಸರ್ಕಾರ ನಡೆಸುವವರು ಮುಂದಿನ ಎರಡು ಮೂರು ವರ್ಷಗಳ ಬಗ್ಗೆ ಯೋಚನೆ ಮಾಡಿ ತಮ್ಮ ನಿರ್ಧಾರ ಮಾಡಬೇಕು ಎಂದರು. ಸರ್ಕಾರ ಸರಿಯಾಗಿ ಪ್ರಾಧಿಕಾರಕ್ಕೆ ಅರ್ಥ ಮಾಡಿಕೊಡಬೇಕೆಂದು ಒತ್ತಾಯ ಮಾಡಿದರು.
ತಿರುಗೇಟು: ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಲವು ನಾಯಕರು ಸೇರ್ಪಡೆ ಕುರಿತ ಕೈ ನಾಯಕರ ಹೇಳಿಕೆಗೆ ತಿರುಗೇಟು ಣೀಡಿದ ಪ್ರೀತಂಗೌಡ, ಕಾಂಗ್ರೆಸ್‌ನಿAದ ಬಿಜೆಪಿಗೆ ಕರೆದುಕೊಂಡು ಬರಲು ಇನ್ನೂ ಯಾವ ನಾಯಕರ ಜೊತೆಗೂ ಮಾತನಾಡಿಲ್ಲ.
ಮುಂದಿನ ದಿನಗಳಲ್ಲಿ ಬಿಜೆಪಿ ಗೆಲ್ಲುವ ದೃಷ್ಟಿಯಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದು ಟಾಂಗ್ ನೀಡಿದರು.
ಬಾಕ್ಸ್
ಸೋಮವಾರ-ಶನಿವಾರ ನಾನ್‌ವೆಜ್ ಇಲ್ಲ:
ಪ್ರೀತಂಗೌಡಗೆ ಕಾಂಗ್ರೆಸ್ ಗಾಳ ವಿಚಾರದ ಬಗ್ಗೆ ಪ್ರೀತಂಗೌಡ ರಾಜಕಾರಣಕ್ಕೆ ಬಂದಿರುವುದು ತತ್ವ ಸಿದ್ಧಾಂತದ ಆಧಾರದ ಮೇಲೆ ಕೆಲಸ ಮಾಡಲು. ಆರು ಸಾವಿರ ಓಟು ಇದ್ದ ಪಕ್ಷಕ್ಕೆ ಈಗ ೭೮ ಸಾವಿರ ಓಟು ಬಂದಿದೆ. ಇದನ್ನು ಬಿಟ್ಟು ನಾಲ್ಕು ಸಾವಿರ ಓಟು ಪಡೆದ ಪಕ್ಷಕ್ಕೆ ಹೋಗ್ತಾರಾ, ಬೇರೆ ಮನೆಗೆ ಹೋಗೋ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ನೆಂಟರು ಬಂದರು ಅಂತ ಹೇಳಿ ಬೇರೆ ಫಾರ್ಮ್ಹೌಸ್ ಅಥವಾ ಗೆಸ್ಟ್ಹೌಸ್‌ನಲ್ಲಿ ಹೋಗಿ ಮಲಗಲ್ಲ. ನಮ್ಮ ಮನೆ ಯಜಮಾನಿಕೆ ಮಾಡಲು ಕಾರ್ಯಕರ್ತರಿದ್ದಾರೆ. ಬಂದಿರುವ ನೆಂಟರು ಸೋಮವಾರ, ಶನಿವಾರ ನಾನ್‌ವೆಜ್ ಕೇಳಿದ್ರೆ ಸಿಗಲ್ಲ ಎಂದು ಮತ್ತೆ ಜೆಡಿಎಸ್ ನಾಯಕರ ಬಗ್ಗೆ ಗೇಲಿ ಮಾಡಿದ ಅವರು, ಬಿಜೆಪಿಯಿಂದಲೇ ಹಾಸನದಲ್ಲಿ ಅಭ್ಯರ್ಥಿ ಆಗ್ತಾರೆ. ಜೆಡಿಎಸ್ ಅನಿವಾರ್ಯವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡ್ತಾರೆ, ಅದಕ್ಕೆ ನಾನು ಅವರಿಗೆ ಸ್ವಾಗತ ಕೋರಿದ್ದೇವೆ ಎಂದರು.

ಅವರೇ ಬೆಂಬಲ ಕೊಡಬಹುದು:
ಸೀಟು ಹಂಚಿಕೆ ತೀರ್ಮಾನ ಮಾಡಿಲ್ಲ. ಆರ್‌ಪಿಐ ಕೂಡ ಹಾಸನ ಕೇಳುತ್ತಿದ್ದಾರೆ.
ಗೆಲುವು ಒಂದೇ ಮಾನದಂಡ, ನಾವೆಲ್ಲ ಕುಳಿತು ತೀರ್ಮಾನ ಮಾಡ್ತೀವಿ. ಗಣಪತಿ ಮುಂದೆ ಹೇಳುತ್ತಿದ್ದೇನೆ, ಬಿಜೆಪಿಯ ಕಾರ್ಯಕರ್ತನೇ ಅಭ್ಯರ್ಥಿಯಾಗಿ ಅವರೇ ಬೆಂಬಲ ಕೊಡಬೇಕಾಗಿ ಬರಬಹುದು ಎಂದು ಭವಿಷ್ಯ ನುಡಿದರು.

error: Content is protected !!