ಚನ್ನರಾಯಪಟ್ಟಣ: ಭೀಮನಗರದಲ್ಲಿ ಬಸ್ ನಿಲ್ದಾಣಕ್ಕೆ ಆದ್ಯತೆ: ಶಾಸಕ ಸಿ.ಎನ್. ಬಾಲಕೃಷ್ಣ ಭರವಸೆ

MLA C. N. Balakrishna said that priority will be given to the construction of a bus stand along with a state road transport bus stop in the coming days for the convenience of the villagers of Jambur Colony, New Bhima Nagar, Nuggehalli Hobli.

ಚನ್ನರಾಯಪಟ್ಟಣ : ನುಗ್ಗೇಹಳ್ಳಿ ಹೋಬಳಿಯ ಜಂಬೂರು ಕಾಲೋನಿ ನೂತನ ಭೀಮ ನಗರ ಗ್ರಾಮಸ್ಥರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಬಸ್ ನಿಲುಗಡೆ ಜೊತೆಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂಬರುವ ದಿನಗಳಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.

ಹೋಬಳಿಯ ಜಂಬೂರು ಕಾಲೋನಿ ನೂತನ ಭೀಮ ನಗರ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು.
ಈ ಹಿಂದೆ ಜಂಬೂರು ಕಾಲೋನಿ ಎಂದು ಕರೆಯಲಾಗುತ್ತಿತ್ತು ಗ್ರಾಮಸ್ಥರೆಲ್ಲ ಸೇರಿ ಭೀಮ ನಗರ ಎಂದು ಹೆಸರಿಟ್ಟಿದ್ದಾರೆ ಇದರಿಂದ ಚನ್ನರಾಯಪಟ್ಟಣ – ತಿಪಟೂರು ಮಾರ್ಗದಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲುಗಡೆಗೆ ಇಂದಿನಿಂದಲೇ ಅವಕಾಶ ಕಲ್ಪಿಸುವಂತೆ ತಿಳಿಸಲಾಗಿದೆ.

ಮುಂಬರುವ ದಿನಗಳಲ್ಲಿ ಗ್ರಾಮದ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದರು ಜೊತೆಗೆ ಈಗಾಗಲೇ ಗ್ರಾಮದಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಹಲವು ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಹಾಗೂ ಗಂಗಾ ಕಲ್ಯಾಣ ಯೋಜನೆ ಮೂಲಕ ಅತಿ ಹೆಚ್ಚು ಬೋರ್ವೆಲ್ ಗಳನ್ನು ಗ್ರಾಮದ ರೈತರಿಗೆ ಉಚಿತವಾಗಿ ಕಲ್ಪಿಸಲಾಗಿದೆ ಮುಂಬರುವ ದಿನಗಳಲ್ಲಿ ಗ್ರಾಮದಿಂದ ತಾವರೆಕೆರೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಮುಂಬರುವ ಆರ್ಥಿಕ ವರ್ಷದಲ್ಲಿ ಅನುದಾನ ಕೊಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಜಂಬೂರು ಗ್ರಾಮದ ನಿವೃತ್ತ ಕಂಡಕ್ಟರ್ ಸಣ್ಣೇಗೌಡ ಶಾಸಕರ ಕಾರ್ಯ ವೈಖರಿ ಮತ್ತು ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ತೊರೆದು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ , ಹೇಮಾವತಿ ಸಕ್ಕರೆ ಕಾರ್ಖಾನೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್‌ಪಿ ರಂಗಸ್ವಾಮಿ ( ಅಣ್ಣಯ್ಯ), ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಹುಲಿಕೆರೆ ಸಂಪತ್ ಕುಮಾರ್, ಮುಖಂಡರಾದ ಜೆಡಿ ಶಂಕರ್, ರಮೇಶ್, ಹೊನ್ನೇಗೌಡ, ಅಣ್ಣಯ್ಯ, ಜಂಬೂರ್ ಮಹೇಶ್, ಗ್ರಾ ಪಂ ಸದಸ್ಯೆ ಹೊನ್ನಮ್ಮ ಧರಣಿ ಕುಮಾರ್, ಮಾಜಿ ಕೃಷಿ ಪತ್ತಿನ ಉಪಾಧ್ಯಕ್ಷ ಧರಣಿ ಕುಮಾರ್, ಗ್ರಾಮಸ್ಥರಾದ ನಾರಾಯಣಸ್ವಾಮಿ, ಪುರುಷೋತ್ತಮ್, ಧನಂಜಯ, ಜೆಡಿಎಸ್ ಯುವ ಮುಖಂಡ ದರ್ಶನ್, ಕೇಶವಮೂರ್ತಿ, ಎಲ್ ರಂಗಯ್ಯ, ನಂಜುಂಡಯ್ಯ, ರಾಜೇಶ್ ನೇತ್ರ, ಸಂಜು ಪ್ರಸಾದ್, ಪ್ರೀತಮ್, ಗಾನವಿ ಲಕ್ಕೆಶ್, ಮಹೇಶ್, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

MLA C. N. Balakrishna said that priority will be given to the construction of a bus stand along with a state road transport bus stop in the coming days for the convenience of the villagers of Jambur Colony, New Bhima Nagar, Nuggehalli Hobli.