🛕 ಮಾಡಾಳು: ಮಾಘ ಅಮಾವಾಸ್ಯೆ: ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿಗೆ ವಿಶೇಷ ಪೂಜೆ

📍ಮಾಡಾಳು: ಮಾಘ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಾಘಮಾಸದ ಕೊನೆಯ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.


🕉️ ಕೋಡಿಮಠ ಜಗದ್ಗುರುಗಳ ಸಂಕಲ್ಪದಂತೆ ಪೂಜೆ

ಪ್ರತಿ ತಿಂಗಳ ಅಮಾವಾಸ್ಯೆಯಂದು Kodimata ಜಗದ್ಗುರುಗಳ ಸಂಕಲ್ಪದಂತೆ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳುವ ವಿಶೇಷ ಪೂಜೆ ಶಾಸ್ತ್ರೋಕ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.


🌿 ಭಕ್ತರನ್ನು ಸೆಳೆದ ದೇವಾಲಯದ ಅಲಂಕಾರ

ಪೂಜೆಯ ಅಂಗವಾಗಿ ದೇವಾಲಯವನ್ನು ಮಾವಿನ ತಳಿರು ತೋರಣ, ಬಾಳೆಕಂದು ಹಾಗೂ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಈ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.


🔔 ಮಹಾಮಂಗಳಾರತಿ

ರಾತ್ರಿ 8 ಗಂಟೆಗೆ ಪುರೋಹಿತರ ವತಿಯಿಂದ ಕೋಡಿಮಠದ ಶ್ರೀ ಶಿವಲಿಂಗಜ್ಜಯ್ಯ ಮೂರ್ತಿ, ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಹಾಗೂ ಅಮ್ಮನವರಿಗೆ ಕರ್ಪೂರಾರತಿ ಮತ್ತು ಮಹಾಮಂಗಳಾರತಿ ಸಲ್ಲಿಸಲಾಯಿತು.


🍲 ದಾಸೋಹ ವ್ಯವಸ್ಥೆ

ಬಂದ ಭಕ್ತಾದಿಗಳಿಗೆ ಶಶಿವಾಳ ಗ್ರಾಮದ ಲೇಟ್ ಶ್ರೀಮತಿ ರಾಮಕ್ಕ ಸಿದ್ದಪ್ಪ ಅವರ ಮಕ್ಕಳು ಮತ್ತು ಮೊಮ್ಮಕ್ಕಳು (ಬುರ್ಜಿ ಮನೆ) ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಯಿತು.


🙏 ವಿವಿಧ ಗ್ರಾಮಗಳಿಂದ ಭಕ್ತರ ಆಗಮನ

ಮಾಡಾಳು, ಕೊಪ್ಪಲು, ಸೀತಾಪುರ, ಯರೆಹಳ್ಳಿ, ಡಿ.ಎಂ. ಕುರ್ಕೆ, ಶಶಿವಾಳ, ರಾಮಪುರ, ಪಿ. ಹೊಸಳ್ಳಿ, ವೈಜಿಹಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಬೊಮ್ಮಸಮುದ್ರ, ಕೆ. ಶಂಕರನಹಳ್ಳಿ, ಕಡಲಮಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು.