ಚನ್ನರಾಯಪಟ್ಟಣ: ಅಪಘಾತ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳಿಗೆ ವಿಮಾ ಹಣ ಪಾವತಿಸಿದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಗಳನ್ನು ಚನ್ನರಾಯಪಟ್ಟಣದ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರದಂದು ಜಪ್ತಿ ಮಾಡಲಾಯಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿನ ಬೇಡಿಗನಹಳ್ಳಿ ಗೇಟ್ ಬಳಿ 2023ರಲ್ಲಿ ಚಿಕ್ಕಮಗಳೂರು ಘಟಕಕ್ಕೆ ಸೇರಿದ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ನಲ್ಲಿದ್ದ ರವಿಕುಮಾರ್(19) ಮತ್ತು ರೇಣುಕಪ್ಪ(52) ಸ್ಥಳದಲ್ಲೆ ಸಾವನ್ನಪಿದ್ದರು. ಬಸ್ ಚಾಲಕನ ಅಜಾಗೂರಕತೆಯಿಂದ ಆದ ಅಪಘಾತದ ವಿರದ್ದ ಮೃತರ ವಾರಸುದಾರರು ಪರಿಹಾರ ಕೋರಿ ಪಟ್ಟಣದ ಕೋರ್ಟ್ನಲ್ಲಿ ಕೇಸ್ ದಾಖಲು ಮಾಡಿದ್ದರು.
ನ್ಯಾಯಲಯವು ಒಂದುವರೆ ವರ್ಷಗಳ ಕಾಲ ವಿಚಾರಣೆ ನಡೆಸಿ 2024ರ ಡಿಸೆಂಬರ್ನಂದು ತೀರ್ಪು ನೀಡಿ ರೇಣುಕಪ್ಪ ಕುಟುಂಬಕ್ಕೆ 20 ಲಕ್ಷ ರೂ. ಮತ್ತು ರವಿಕುಮಾರ್ ಕುಟುಂಬಕ್ಕೆ 13 ಲಕ್ಷ ರೂ. ಪರಿಹಾರವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ಘಟಕ ನೀಡಬೇಕೆಂದು ಆದೇಶಿಸಿತ್ತು.
ನ್ಯಾಯಲಯದ ಆದೇಶದನ್ವಯ ಪರಿಹಾರದ ಹಣವನ್ನು ಇದುವರೆವಿಗೂ ನೀಡದ ಹಿನ್ನಲೆಯಲ್ಲಿ ನ್ಯಾಯಾಲಯವು ಜಾರಿ ಕೇಸ್ ಹೊರಡಿಸಿ ಎರಡ್ಮೂರು ಬಾರಿ ನೋಟಿಸ್ ನೀಡಿದರೂ ಹಣ ಪಾವತಿಸದ ಹಿನ್ನಲೆಯಲ್ಲಿ ಶುಕ್ರವಾರದಂದು ಬೆಳಗ್ಗೆ ಪಟ್ಟಣದ ಬಸ್ನಿಲ್ದಾಣದಲ್ಲಿ ಚಿಕ್ಕಮಗಳೂರು ಘಟಕಕ್ಕೆ ಸೇರಿದ 2ಬಸ್ಗಳನ್ನು ಅಮೀನ್ರ ಮೂಲಕ ಜಪ್ತಿ ಮಾಡಿ ನ್ಯಾಯಲದ ವಶಕ್ಕೆ ಒಪ್ಪಿಸಲಾಗಿತ್ತು.
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿದ್ದ ಎರಡು ಬಸ್ಗಳಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಗಳನ್ನು ನ್ಯಾಯಾಲಯ ವಶಕ್ಕೆ ಪಡೆದ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಚನ್ನರಾಯಪಟ್ಟಣದ ಘಟಕದಿಂದ ಬೇರೆ ಬಸ್ಗಳಲ್ಲಿ ಪ್ರಯಾಣಿಸಲು ಅನವು ಮಾಡಿಕೊಟ್ಟಿತ್ತು.
ಸಂತ್ರಸ್ತರ ಪರ ವಕೀಲರಾದ ದರ್ಶನ್ ಪಟೇಲ್ರವರು ಮಾತನಾಡಿ, ಬಸ್ಗಳನ್ನು ಘನ ನ್ಯಾಯಾಲಯವು ವಶಕ್ಕೆ ಪಡೆದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ಡಿಪೋ ವ್ಯವಸ್ಥಾಪಕರು ವಶಕ್ಕೆ ಪಡೆದಿರುವ ಬಸ್ಗಳನ್ನು ಬಿಡುವಂತೆ ಬದಲಾಗಿ ಬೇರೆ ಎರಡು ಬಸ್ಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವುದದಾಗಿ ಮನವಿ ಮಾಡಿದರು, ಇದು ನ್ಯಾಯಾಲಯದ ಆದೇಶ ನೀವು ಹಣ ಕಟ್ಟದ ಹೊರತು ಬಸ್ಗಳನ್ನು ನ್ಯಾಯಾಲಯವು ಹರಾಜು ನಡೆಸಿ ಸಂತ್ರಸ್ತ ಕುಟುಂಬಗಳಿಗೆ ಹಣ ತುಂಬಿಕೊಡುತ್ತದೆ ಎಂದು ಹೇಳಿದ್ದೇವು, ಘಟಕದವರು ಮಧ್ಯಾಹ್ನದ ವೇಳೆಗೆ 16 ಲಕ್ಷ ರೂ. ಹಣ ಪಾವತಿಸಿ, ಮಿಕ್ಕ 17 ಲಕ್ಷ ರೂ. ಗಳನ್ನು ಫೆ. 28ಕ್ಕೆ ಕಟ್ಟುವುದಾಗಿ ಹೇಳಿ ನ್ಯಾಯಾಲಯದಿಂದ ಬಸ್ ಬಿಡಿಸಿಕೊಂಡು ಹೋದರು ಎಂದರು.
ಈ ವೇಳೆ ಸಹಾಯಕ ವಕೀಲ ಶರತ್ಕುಮಾರ್, ಸಂತ್ರಸ್ತ ಕುಟುಂಬದಿಂದ ರಾಕೇಶ್, ಶ್ರೀನಿವಾಸ್ ಇದ್ದರು.
Two buses belonging to the Karnataka State Transport Corporation were seized on Friday on the orders of the 4th Additional District Court in Channarayapatna, following the payment of insurance money to the families of the victims in the accident case.










