ಚನ್ನರಾಯಪಟ್ಟಣದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ: 10 ಅರ್ಜಿಗಳ ಸ್ವೀಕಾರ, ತ್ವರಿತ ಕ್ರಮಕ್ಕೆ ಸೂಚನೆ

Lokayukta Police Inspector C.L. Chandrashekhar held a taluk-level public relations meeting at the town's taluk office to discuss the grievances of the public and receive feedback from the public.

ಚನ್ನರಾಯಪಟ್ಟಣ: ಸಾರ್ವಜನಿಕರ ಕುಂದುಕೊರತೆಗಳ ಕುರಿತಾಗಿ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಸಿ.ಎಲ್.ಚಂದ್ರಶೇಖರ್‌ ಅವರು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಪಡೆದು ಚರ್ಚಿಸಿದರು.

ಜಿಲ್ಲಾ ಲೋಕಾಯುಕ್ತ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಇನ್ಸ್ ಪೆಕ್ಟರ್ ಸಿ.ಎಲ್.ಚಂದ್ರಶೇಖರ್‌ರವರು ಸಾರ್ವಜನಿಕರಿಂದ ಸಮಸ್ಯೆಗಳ ಕುರಿತಾಗಿ ಅರ್ಜಿ ಸ್ವೀಕರಿಸಿದರು.

ಸ್ವೀಕಾರಗೊಂಡ 10 ಅರ್ಜಿಗಳ ಪೈಕಿ 8 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂದಿಸಿದವಿದ್ದವು, ಮಿಕ್ಕ 2 ಅರ್ಜಿಗಳು ತಾಲ್ಲೂಕು ಪಂಚಾಯಿತಿ ಇಲಾಖೆಗೆ ಸೇರಿದವಾಗಿದ್ದವು. ಅರ್ಜಿ ಇಡಿದು ಬಂದ ಸಾರ್ವಜನಿಕರನ್ನು ಕೂರಿಸಿ ಆಗಿರುವ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಂದ ಸಮಸ್ಯೆಯ ಕುರಿತಾಗಿ ಚರ್ಚಿಸಿದರು.

ಪ್ರಮುಖವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿ ಪಹಣಿಯಲ್ಲಿ ಇರುವ ದೋಷದ ಕುರಿತಾಗಿ ಎಸಿ ಕೋರ್ಟ್‌ಗೆ ದೂರು ದಾಖಲಾಗುವ ವೇಳೆ ಮ್ಯುಟೇಶನ್‌ದಲ್ಲಿ ಇದ್ದ ಮಾಹಿತಿ ಇದೀಗ ಇಲ್ಲ ಎಂಬ ಆರೋಪವಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಶಿರಸ್ತೆದಾರ್ ಪವನ್‌ರೊಂದಿಗೆ ಚರ್ಚಿಸಿ ರೇಕಾರ್ಡ್ ಕೊಠಡಿಯಲ್ಲಿ ಅಸಲಿ ಪ್ರತಿ ಹುಡುಕಿ ರೈತನಿಗೆ ನ್ಯಾಯ ಒದಗಿಸುವಂತೆ ಸೂಚಿಸಿದರು.

ಮತ್ತೊಂದು ಪ್ರಕರಣದಲ್ಲಿ ತಾಲ್ಲೂಕಿನ ಗೋವಿನಕೆರೆ ಗ್ರಾಮದಲ್ಲಿ ದೇವರು ಜಮೀನನ್ನು ನಕಲಿ ದಾಖಲೆ ಸೃಷ್ಠಿಸಿ ಪರಭಾರೆ ಮಾಡಿದ್ದಾರೆ. ನಮ್ಮ ಗ್ರಾಮದಲ್ಲಿ ಇಲ್ಲದ ವ್ಯಕ್ತಿಗೆ ಖಾತೆ ಕೂರಿಸಿ ಆತನಿಂದ ಸುಮ ನಟರಾಜ್ ಎಂಬುವವರಿಗೆ ಕ್ರಯ ಮಾಡಲಾಗಿದೆ ಎಂದು ಗ್ರಾಮಸ್ಥರು ಹೊತ್ತು ತಂದ ದೂರಿಗೆ ಲೋಕಾಯುಕ್ತರು ಬಾಗೂರು ಹೋಬಳಿ ರಾಜಸ್ವ ನಿರೀಕ್ಷಕರಿಂದ ಮಾಹಿತಿ ಪಡೆದು ಭೂಮಿ ನೊಂದಣಿ ಆಗಿರುವುದರಿಂದ ಸಿವಿಲ್ ಕೋರ್ಟ್ನಲ್ಲಿ ದೂರು ದಾಖಲಿಸುವಂತೆ ಸೂಚಿಸಿದರು.

ಈ ಕುರಿತು ಮಾತನಾಡಿದ ಲೋಕಾಯುಕ್ತ ಇನ್ಸ್ ಪೆಕ್ಟರ್ ಸಿ.ಎಲ್.ಚಂದ್ರಶೇಖರ್, ಬೆಳಗ್ಗೆ 11 ಘಂಟೆಯಿಂದ 1 ಘಂಟೆವರೆಗೂ ಸಾರ್ವಜನಿಕರಿಂದ ಅರ್ಜಿ ಪಡೆದು ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ಹಂತದಲ್ಲಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಅವರು ಬಗೆಹರಿಸುವುದಾಗಿ ಹೇಳಿದ್ದಾರೆ.

ಅಧಿಕಾರಿಗಳು ಅರ್ಜಿಯ ಕುರಿತಾಗಿ ಏನು ಕ್ರಮ ಎಂಬುದಾಗಿ ಮಾಹಿತಿ ಪಡೆಯುತ್ತೇವೆ. ಮುಂದಿನ ಸಭೆ ವೇಳೆಗೆ ಅರ್ಜಿ ಇತ್ಯರ್ಥದ ಬಗ್ಗೆ ಮಾಹಿತಿ ಪಡೆಯುತ್ತೆವೆ ಎಂದರು.

ಪ್ರತಿ ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ಕರೆದು ಜನರ ಅಹವಾಲು ಪಡೆಯಲಾಗುತ್ತದೆ ಎಂದರು.

ಈ ವೇಳೆ ಉಪತಹಶೀಲ್ದಾರ್ ನಾಗರಾಜು, ತಾಲ್ಲೂಕು ಪಂಚಾಯಿತಿ ಇಓ ಹರೀಶ್, ಎಡಿಎಲ್‌ಆರ್ ಲಲ್ಲೂ ಪ್ರಸಾದ್ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.

Lokayukta Police Inspector C.L. Chandrashekhar held a taluk-level public relations meeting at the town’s taluk office to discuss the grievances of the public and receive feedback from the public.