ಆಲೂರು: ಕಾಂಗ್ರೆಸ್ ಪಕ್ಷವನ್ನು ಸಕಲೇಶಪುರ – ಆಲೂರು -ಕಟ್ಟಾಯ ಕ್ಷೇತ್ರದಲ್ಲಿ ಬಲಪಡಿಸಲು ಶ್ರಮಿಸುತ್ತಿರುವ ಮುರುಳಿ ಮೋಹನ್ ರವರ ತೇಜೋವದೆ ಮಾಡುವ ಉದ್ದೇಶದಿಂದ ಡಿಸಿ ಸಣ್ಣ ಸ್ವಾಮಿಗೆ ಹಲ್ಲೆಯಾಗಿದೆ ಎಂದು ಅವರ ಸಹಚರರು ಸುಳ್ಳು ಆರೋಪ ಮಾಡುತ್ತಿದ್ದು ಕೊಡಲೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಕಾಂಗ್ರೆಸ್ ಓ ಬಿ ಸಿ ಅಧ್ಯಕ್ಷ ರಾಜಶೇಖರ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತಾನಾಡಿದ ಅವರು ಕಾಂಗ್ರೆಸ್ ಪಕ್ಷ ಮತ್ತು ಮುಖಂಡರಾದ ಮುರುಳಿ ಮೋಹನ್ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ. ಪಕ್ಷದ ಒಳಗೆ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡುವವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಬೇಕು.
ಸಕಲೇಶಪುರ ತಾಲೂಕಿನಲ್ಲಿ ಇತ್ತೀಚೆಗೆ ಮಾನ್ಯ ಕಂದಾಯ ಸಚಿವರಾದ ಕೃಷ್ಣೆ ಬೈರೇಗೌಡ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಯಶಸ್ಸು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ದಿನೇ ದಿನೇ ಹೆಚ್ಚುತ್ತಿದ್ದು ಇದರ ಶ್ರೇಯಸ್ಸು ಮುರಳಿ ಮೋಹನ್ ರವರಿಗೆ ಸೇರಬೇಕು ಮತ್ತು ಮುರಳಿ ಮೋಹನ್ ರವರ ಸಂಘಟನೆಯನ್ನು ಮೆಚ್ಚಿ ನೂರಾರು ಸಂಖ್ಯೆಯಲ್ಲಿ ಬೇರೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಹಿಂದಿನಿಂದಲೂ ನಮ್ಮ ಪಕ್ಷಕ್ಕೆ ದುಡಿಯುವ ನಾಯಕರುಗಳು ಬಂದರೆ ಅವರ ವಿರುದ್ಧ ವ್ಯವಸ್ಥಿತವಾದ ಪಿತೂರಿ ಮಾಡಲೆಂದೆ ಒಂದು ಗುಂಪು ಕಳೆದ 15 ವರ್ಷದಿಂದ ಪಕ್ಷ ದ್ರೋಹ ಕೆಲಸ ಮಾಡುತ್ತಿದೆ. ಇವರುಗಳು ವಿರೋಧ ಪಕ್ಷದವರ ಜೊತೆ ಸೇರಿಕೊಂಡು ಮುಂಬರುವ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ ಈ ಎಲ್ಲಾ ಕ್ರೆಡಿಟ್ ಮುರಳಿ ಮೋಹನ್ ರವರಿಗೆ ಸಲ್ಲಿಸುತ್ತದೆ ಇದನ್ನು ತಡಿಯಬೇಕು ಎಂಬ ದುರುದ್ದೇಶದಿಂದ ಈ ರೀತಿಯಾದ ಅಪಪ್ರಚಾರಗಳನ್ನ ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ.
ಇದೇ ಗುಂಪು ಹಲವಾರು ಬಾರಿ ಹೈಕಮಾಂಡ್ ಗೆ ಸುಳ್ಳು ದೂರುಗಳನ್ನು ನೀಡಲು ಹೋಗಿ ಚಿ ಮಾರಿ ಹಾಕಿಸಿಕೊಂಡು ಬಂದಿದೆ. ಆದರೂ ಬುದ್ದಿ ಕಲಿಯದೇ ಪಕ್ಷದೊಳಗೆ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡುವವರು ಗೌರವಾನ್ವಿತವಾಗಿ ಪಕ್ಷದಿಂದ ಹೊರ ಹೋಗುವುದೇ ಸೂಕ್ತ. ಇಲ್ಲವಾದಲ್ಲಿ ಇವರುಗಳು ಪಕ್ಷದ ಸಂಘಟನೆಗೆ ಮಾರಕವಾಗುತ್ತಾರೆ ಎಂದರು..
ಕಾಂಗ್ರೆಸ್ ಮುಖಂಡ ಹೆಚ್ ಎಂ ನಾರಾಯಣ್ ಮಾತಾನಾಡಿ ಈ ಇಂದಿನ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಸೋತ ಅಭ್ಯರ್ಥಿಗಳು ಸಂಘಟನೆ ಮಾಡದೆ ಪಕ್ಷವನ್ನು ಬಲಪಡಿಸದೆ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು ನಮ್ಮ ಮುಂದೆ ಇದೆ ಆದರೆ ಪಕ್ಷಕ್ಕಾಗಿ ಪಕ್ಷಕ್ಕೋಸ್ಕರ ಸೋತರೂ ತಮ್ಮ ತನು ಮನ ಧನ ದೊಂದಿಗೆ ಪಕ್ಷ ಸಂಘಟನೆಗೆ ತೊಡಗಿಸಿಕೊಂಡಿರುವ ಮುರುಳಿ ಮೋಹನ್ ವಿರುದ್ಧ ಸುಳ್ಳು ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ. ಅವರ ಬಗ್ಗೆ ಇದೇ ರೀತಿ ಮುಂದುವರಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕು ಕಾಂಗ್ರೆಸ್ ಓಬಿಸಿ ಅಧ್ಯಕ್ಷ ರಾಜಶೇಖರ್ ಮರಸು ಕೊಪ್ಪಲು. ಮುಖಂಡರಾದ ಸರ್ವರ್ ಪಾಷಾ, ಎಚ್ ಎಂ ನಾರಾಯಣ್, ಶಂಕರ್ ಇದ್ದರು.










