ಸಕಲೇಶಪುರ: ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಶಾಸಕ ಸಿಮೆಂಟ್ ಮಂಜು

MLA Cement Manju said that no one should violate road safety driving rules.

ಸಕಲೇಶಪುರ: ರಸ್ತೆ ಸುರಕ್ಷತೆ ಚಾಲನಾ ನಿಯಮಗಳನ್ನು ಯಾರು ಸಹ ಉಲ್ಲಂಘಿಸಬಾರದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಎ.ಆರ್.ಟಿ.ಓ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಅಂಗವಾಗಿ ಬೀದಿ ನಾಟಕಗಳ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶ ಹಾಗೂ ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅದರಲ್ಲೂ ಯುವ ಜನಾಂಗ ವಾಹನಗಳನ್ನು ಸರಿಯಾದ ರೀತಿಯಲ್ಲಿ ಚಾಲನೆ ಮಾಡದೆ ಅಪಘಾತಕ್ಕೀಡಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಹೊಂದಬೇಕು.

ಪೋಷಕರು ಅಪ್ತಾಪ್ತ ಮಕ್ಕಳಿಗೆ ವಾಹನಗಳನ್ನು ಚಾಲನೆ ಮಾಡಲು ನೀಡಬಾರದು. ಮಕ್ಕಳಿಗೆ 18 ವರ್ಷ ವಯಸ್ಸು ತುಂಬಿದ ನಂತರ ಚಾಲನಾ ಪರವಾನಾಗಿ ಮಾಡಿಸಿ ವಾಹನಗಳ ಚಾಲನೆ ಕುರಿತು ಸಂಪೂರ್ಣವಾಗಿ ಅರಿವು ಹೊಂದಿದ ನಂತರ ವಾಹನಗಳನ್ನು ಚಲಾಯಿಸಲು ಮುಂದಾಗಬೇಕು.

ಪ್ರತಿಯೊಂದು ಜೀವವು ಅಮೂಲ್ಯವಾಗಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಅರಿತು ವಾಹನಗಳನ್ನು ಚಾಲನೆ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಆಟೋ, ಟ್ಯಾಕ್ಸಿ, ಲಾರಿ ಚಾಲಕರಿಗೆ ಈ ರೀತಿಯ ಜಾಗೃತಿ ಕಾರ್ಯಕ್ರಮವನ್ನು ಇಲಾಖೆ ವತಿಯಿಂದ ಆಯೋಜಿಸಬೇಕು ಎಂದರು.

ಎ.ಆರ್.ಟಿ.ಓ ಕಚೇರಿಯ ಮುಖ್ಯ ಅಧೀಕ್ಷಕ ಗಿರೀಶ್ ಮಾತನಾಡಿ, ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಅಂಗವಾಗಿ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಇಂದು ಶಾಸಕರಿಂದ ಚಾಲನೆ ನೀಡಲಾಗಿದೆ. ಸಂಚಾರಿ ನಿಯಮಗಳನ್ನು ಎಲ್ಲಾರು ಅನುಸರಿಸಬೇಕು ಹಾಗೂ ಇದರಿಂದ ಮಾತ್ರ ಅಪಘಾತಗಳನ್ನು ತಡೆಯಲು ಸಾಧ್ಯ ಎಂದರು.

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ಈ ಸಂಧರ್ಭದಲ್ಲಿ ಶಾಸಕರು ಖುದ್ದಾಗಿ ದ್ವಿಚಕ್ರ ವಾಹನಗಳ ಚಾಲಕರಿಗೆ ಹಾಗೂ ಆಟೋ ಚಾಲಕರಿಗೆ ಸಂಚಾರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಎ.ಆರ್.ಟಿ.ಓ ಸರಸ್ವತಿ, ಆರ್.ಟಿ.ಓ ಕಚೇರಿ ಸಿಬ್ಬಂದಿಗಳಾದ ವೀಣಾ, ಸೋಮಶೇಖರ್, ಬಿಜೆಪಿ ಮುಖಂಡ ಬಾಬಣ್ಣ, ಇತರರಿದ್ದರು.

MLA Cement Manju said that no one should violate road safety driving rules.