ಅರಸೀಕೆರೆ: ಅರಕೆರೆಯಲ್ಲಿ ಜ. 24-25ರಂದು ವಾಲಿಬಾಲ್‌ ಪಂದ್ಯಾವಳಿ

The Kariamma Devi Cup Volleyball Tournament is being organized on January 24th and 25th as part of the Kariamma Devi Jatra Mahotsav in Arakere village of Arasekere taluk.

ಅರಸೀಕೆರೆ: ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಜ. 24 ಹಾಗೂ 25 ರಂದು ಕರಿಯಮ್ಮ ದೇವಿ ಕಪ್‌ ವಾಲಿಬಾಲ್‌ ಪಂದ್ಯಾವಳಿ ಆಯೋಜಿಸಲಾಗಿದೆ.

ಪ್ರಥಮ ಬಹುಮಾನ 30 ಸಾವಿರ ರೂ., ದ್ವಿತೀಯ 20 ಸಾವಿರ ರೂ., ತೃತೀಯ 15 ಸಾವಿರ ರೂ., ನಾಲ್ಕನೇ ಬಹುಮಾನ 10 ಸಾವಿರ ರೂ. ಮತ್ತು ಐದನೇ ಬಹುಮಾನವಾಗಿ 8 ಸಾವಿರ ರೂ. ನೀಡಲಾಗುವುದು.

ಪ್ರವೇಶ ಶುಲ್ಕ 999 ರೂ. ನಿಗದಿಪಡಿಸಿದ್ದು ಆಸಕ್ತ ತಂಡಗಳು ಮೊ.ನಂ. 9741506723 ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು.

ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಹೆಚ್‌.ಕೆ.ಸುರೇಶ್‌, ಮಾಜಿ ಸಚಿವ ಬಿ.ಶಿವರಾಂ, ಮಾಜಿ ಶಾಸಕ ಕೆ.ಎಸ್‌‍.ಲಿಂಗೇಶ್‌, ವಿಶೇಷ ನಿವೃತ್ತ ಜಿಲ್ಲಾಧಿಕಾರಿ ಕವಿತಾ ಬಿ.ನಾಗರಾಜ್‌ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

The Kariamma Devi Cup Volleyball Tournament is being organized on January 24th and 25th as part of the Kariamma Devi Jatra Mahotsav in Arakere village of Arasekere taluk.