ಬೆಂಗಳೂರು : ಕರ್ನಾಟಕದಲ್ಲಿ ಗಿಲ್ಲಿ ಹವಾ: ಟ್ಯಾಟೂ ಕ್ರೇಜ್, ಭಾವುಕರಾದ ಅಪ್ಪ–ಅಮ್ಮ

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ವೀಕ್ ತಲುಪಿದ್ದು, ಸ್ಪರ್ಧೆ ದಿನೇ ದಿನೇ ರೋಚಕವಾಗುತ್ತಿದೆ. ಕೊನೆಯ ವಾರದಲ್ಲಿ ರಾಶಿಕಾ ಶೆಟ್ಟಿ ಎಲಿಮಿನೇಟ್ ಆಗಿದ್ದು, ಈಗ ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ, ಧ್ರುವಂತ್, ರಘು ಹಾಗೂ ಧನುಷ್ ಮಾತ್ರ ಮನೆಯಲ್ಲಿ ಉಳಿದಿದ್ದಾರೆ.

ಈ ನಡುವೆ ಬಿಗ್ ಬಾಸ್ ಸ್ಪರ್ಧಿ, ಹಾಸ್ಯ ಕಲಾವಿದ ಗಿಲ್ಲಿಗೆ ಕರ್ನಾಟಕದಾದ್ಯಂತ ಭಾರೀ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಮನೆಯಲ್ಲಿ ಸದಾ ತಮಾಷೆ ಮಾಡುತ್ತಾ, ಎಲ್ಲರನ್ನು ನಗಿಸುವ ಗಿಲ್ಲಿ ವೀಕ್ಷಕರಿಗೆ ಪ್ರಾಣವಾಗಿದ್ದಾರೆ. ಫಿನಾಲೆ ವೀಕ್ ತಲುಪಿರುವುದು ಗಿಲ್ಲಿ ಅಭಿಮಾನಿಗಳ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಗಿಲ್ಲಿ ಟ್ಯಾಟೂ ಕ್ರೇಜ್

ಗಿಲ್ಲಿ ಹೆಸರು ಜನರ ಬಾಯಲ್ಲಿ ಜೋರಾಗಿ ಓಡಾಡ್ತಿದೆ. ಗಿಲ್ಲಿಗೆ ವೋಟ್ ಹಾಕಿ ಅಂತ ಸಾಂಗ್ ಮಾಡಿ ಹಾಡುವವರೂ ಇದ್ದಾರೆ. ಇದರ ನಡುವೆ ಈಗ ಗಿಲ್ಲಿ ಟ್ಯಾಟೂ ಟ್ರೆಂಡ್ ಕೂಡ ಶುರುವಾಗಿದೆ. ಗಿಲ್ಲಿಯೊಬ್ಬ ಅಭಿಮಾನಿ ತಮ್ಮ ಕೈಮೇಲೆ ಗಿಲ್ಲಿ ಮುಖದ ಟ್ಯಾಟೂ ಹಾಕಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾವುಕರಾದ ಗಿಲ್ಲಿ ಪಾಲಕರು

ಅಭಿಮಾನಿಯ ಕೈಮೇಲೆ ಮಗನ ಮುಖ ಮೂಡಿರೋದನ್ನು ನೋಡಿದ ಗಿಲ್ಲಿ ತಂದೆ–ತಾಯಿ ಭಾವುಕರಾಗಿದ್ದಾರೆ. ಈ ಟ್ಯಾಟೂವನ್ನು ಗಿಲ್ಲಿ ತಾಯಿ ರಿವೀಲ್ ಮಾಡಿದ್ದು, ಮಗನಿಗೆ ಇಷ್ಟೊಂದು ಪ್ರೀತಿ ಸಿಕ್ಕಿದೆ ಎನ್ನುವುದನ್ನು ಕಂಡು ಅವರ ಕಣ್ಣಲ್ಲಿ ನೀರು ತುಂಬಿದೆ.

ಗಿಲ್ಲಿ ತಂದೆ ಕಣ್ಣಲ್ಲಿ ಸಂತೋಷದ ಹನಿ

ಹಾಸ್ಯ ಕಲಾವಿದ ಗಿಲ್ಲಿ ಈ ಮಟ್ಟಕ್ಕೆ ಬರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಆ ಹೋರಾಟವೆಲ್ಲ ಗಿಲ್ಲಿ ತಂದೆಗೆ ಚೆನ್ನಾಗಿ ಗೊತ್ತು. ಆದರೆ ಮಗನಿಗೆ ಇಷ್ಟೊಂದು ದೊಡ್ಡ ಅಭಿಮಾನಿ ಬಳಗ ಇದೆ ಎಂಬುದನ್ನು ಅವರು ಊಹಿಸಿರಲಿಲ್ಲ. ಟ್ಯಾಟೂ ಹಾಕಿಸಿಕೊಳ್ಳುವಷ್ಟು ಮಗ ಜನಮನ ಗೆಲ್ಲುತ್ತಾನೆ ಎನ್ನುವ ಕಲ್ಪನೆ ಕೂಡ ಅವರಿಗೆ ಇರಲಿಲ್ಲ. ಈಗ ಮಗನ ಯಶಸ್ಸು ನೋಡಿ ಗಿಲ್ಲಿ ತಂದೆಯ ಕಣ್ಣಲ್ಲಿ ಸಂತೋಷದ ಹನಿ ಹರಿದಿದೆ.

ಗಿಲ್ಲಿ ಟ್ಯಾಟೂ ಬಿಡಿಸೋದು ಕಷ್ಟ!

ಗಿಲ್ಲಿಯ ಕೂದಲಿನ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಕೂದಲು ಬಾಚಲ್ಲ ಅಂತ ಸಹ ಸ್ಪರ್ಧಿಗಳು ಆರೋಪ ಮಾಡಿದ್ದಾರೆ. ಇದೇ ಕಾರಣಕ್ಕೆ ಕಾವ್ಯಾ ಗಿಲ್ಲಿಗೆ ಬಾಚಣಿಕೆಯನ್ನೂ ನೀಡಿದ್ದಾರೆ. ಕಾವ್ಯಾ ಹಾಗೂ ರಕ್ಷಿತಾ ಈ ವಿಷಯದ ಬಗ್ಗೆ ಚರ್ಚೆ ಕೂಡ ನಡೆಸಿದ್ದಾರೆ.

ಈ ನಡುವೆ ಪ್ರಸಿದ್ಧ ಟ್ಯಾಟೂ ಆರ್ಟಿಸ್ಟ್ ಟ್ಯಾಟೂ ಗೋಸ್ಟ್ ಕಲರ್ಸ್ ಕನ್ನಡಕ್ಕೆ ಮನವಿ ಮಾಡಿದ್ದು, “ದಯವಿಟ್ಟು ಗಿಲ್ಲಿಗೆ ಕೂದಲು ಬಾಚಿಕೊಳ್ಳೋಕೆ ಹೇಳಿ. ಕೂದಲು ಕೆದರಿದ್ರೆ ಅದನ್ನ ಟ್ಯಾಟೂದಲ್ಲಿ ಮೂಡಿಸೋದು ತುಂಬಾ ಕಷ್ಟ” ಎಂದಿದ್ದಾರೆ.

ಫಿನಾಲೆಗೆ ಹೋಗ್ತಾರಾ ಗಿಲ್ಲಿ?

ಬಿಗ್ ಬಾಸ್ ಮನೆಯಲ್ಲಿ 15 ವಾರಗಳನ್ನು ಯಶಸ್ವಿಯಾಗಿ ಮುಗಿಸಿ, 16ನೇ ವಾರಕ್ಕೆ ಅಂದ್ರೆ ಫಿನಾಲೆ ವೀಕ್ ತಲುಪಿರುವ ಗಿಲ್ಲಿಗೆ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. 15ನೇ ವಾರದಲ್ಲಿ ಸ್ವಲ್ಪ ಡಲ್ ಆಗಿದ್ದ ಗಿಲ್ಲಿಗೆ ಫಿನಾಲೆ ಸಿಕ್ಸ್ ಕಂಟೆಸ್ಟೆಂಟ್ ಆಗಲಿಲ್ಲ ಎಂಬ ಬೇಸರವೂ ಇತ್ತು. ಆದ್ರೆ ಫ್ಯಾನ್ಸ್ ಗಿಲ್ಲಿಯನ್ನು ಬಿಟ್ಟುಕೊಟ್ಟಿಲ್ಲ.

ಈಗ ಬಿಗ್ ಬಾಸ್ ಕೊನೆಯ ವಾರದಲ್ಲಿ ಮತ್ತೊಂದು ಟ್ವಿಸ್ಟ್ ಇಟ್ಟಿದ್ದು, ವಾರದ ಮಧ್ಯೆ ಎಲಿಮಿನೇಷನ್ ನಡೆಯಲಿದೆ. ಯಾರು ಹೊರಹೋಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಆದರೂ ಗಿಲ್ಲಿ ಫಿನಾಲೆಯಲ್ಲಿ ಇರ್ತಾರೆ ಎಂಬ ಭರವಸೆ ಅವರ ಅಭಿಮಾನಿಗಳಲ್ಲಿ ಗಟ್ಟಿಯಾಗಿ ಮೂಡಿದೆ.