ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಅಂಗವಾಗಿ ಬಿಡುಗಡೆಯಾದ ‘ಟಾಕ್ಸಿಕ್’ ಸಿನಿಮಾದ ಗ್ಲಿಂಪ್ಸ್ ನಿರೀಕ್ಷೆಗೂ ಮೀರಿ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದು, ದಾಖಲೆ ಮೇಲೆ ದಾಖಲೆ ಬರೆದಿದೆ. ಯೂಟ್ಯೂಬ್ನಲ್ಲಿ ಕೇವಲ 22 ಗಂಟೆಗಳಲ್ಲಿ 48 ಮಿಲಿಯನ್ (4.8 ಕೋಟಿ) ವೀವ್ಸ್ ಪಡೆದುಕೊಂಡಿರುವ ಗ್ಲಿಂಪ್ಸ್, ಸೋಷಿಯಲ್ ಮೀಡಿಯಾದಾದ್ಯಂತ ಟ್ರೆಂಡ್ ಆಗುತ್ತಿದೆ.
ಇಷ್ಟು ಕಡಿಮೆ ಸಮಯದಲ್ಲಿ ಇಂತಹ ಅಪಾರ ವೀಕ್ಷಣೆ ಸಿಕ್ಕಿರುವುದು ಅಪರೂಪದ ದಾಖಲೆ. ಸಿನಿಮಾ ಬಿಡುಗಡೆಯಾದ ಬಳಿಕ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಎಷ್ಟು ಕೋಟಿ ಮಂದಿ ವೀಕ್ಷಿಸಬಹುದು ಎಂಬುದೇ ಅಭಿಮಾನಿಗಳ ಚರ್ಚೆಯ ವಿಷಯವಾಗಿದೆ.
ಇನ್ನೂ ಟ್ವಿಟ್ಟರ್ ಟ್ರೆಂಡಿಂಗ್ನಲ್ಲೂ ‘ಟಾಕ್ಸಿಕ್’ ಮುಂಚೂಣಿಯಲ್ಲೇ ಇದ್ದು, ಇದುವರೆಗೆ 5.50 ಲಕ್ಷಕ್ಕೂ ಅಧಿಕ ಪೋಸ್ಟ್ಗಳು ಸಿನಿಮಾವನ್ನು ಕುರಿತು ಅಪ್ಲೋಡ್ ಆಗಿವೆ. ಇದು ಕನ್ನಡ ಸಿನಿಮಾಗಳ ಇತಿಹಾಸದಲ್ಲೇ ದೊಡ್ಡ ದಾಖಲೆ ಎನ್ನಬಹುದು.
ಧುರಂಧರ್ 2 ಮುಂದೂಡಿಕೆ ಆಗುತ್ತಾ?
ಟಾಕ್ಸಿಕ್ ಬಿಡುಗಡೆ ದಿನವೇ ‘ಧುರಂಧರ್ 2’ ಸಿನಿಮಾ ಕೂಡ ರಿಲೀಸ್ ಆಗಲಿದ್ದು, ಟಾಕ್ಸಿಕ್ ಗ್ಲಿಂಪ್ಸ್ ನಂತರ ಕ್ರಿಯೇಟ್ ಆಗಿರುವ ಭಾರೀ ಹೈಪ್ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಎರಡೂ ಸಿನಿಮಾಗಳ ಕ್ಲ್ಯಾಶ್ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದೆ.
ಧುರಂಧರ್ 2 ಟೀಮ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದರೆ ಉತ್ತಮ ಎಂಬ ಅಭಿಪ್ರಾಯದ ಪೋಸ್ಟ್ಗಳು ಹರಿದಾಡುತ್ತಿದ್ದು, ಧುರಂಧರ್ ತಂಡದ ಮುಂದಿನ ನಡೆ ಏನು? ಅನ್ನೋದು ಈಗ ಎಲ್ಲರ ಕುತೂಹಲವಾಗಿಸಿದೆ.










