ಚನ್ನರಾಯಪಟ್ಟಣ: ಜ.11ಕ್ಕೆ ಟೈಮ್ಸ್ ಒಲಿಂಪಿಯಾಡ್ ಪರೀಕ್ಷೆ -ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಅವಕಾಶ

Times Education Institute Secretary B.K. Gangadhar said that the organization has organized the Times Olympiad exam on Sunday, January 11, with the aim of providing scholarships to talented students of Channarayapatna taluk.

ಚನ್ನರಾಯಪಟ್ಟಣ: ತಾಲ್ಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ ಜ.11 ಭಾನುವಾರ ಟೈಮ್ಸ್ ಒಲಿಂಪಿಯಾಡ್ ಪರೀಕ್ಷೆಯನ್ನು ಆಯೋಜಿಸಲಾಗಿದೆ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025-26 ನೇ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿ (ರಾಜ್ಯ CBSE, ICSE ಪಠ್ಯಕ್ರಮ) ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದರು.

ಚನ್ನರಾಯಪಟ್ಟಣ ಟೈಮ್ಸ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ದಿನದಂದು ಆಯ್ದ ನಿಲ್ದಾಣಗಳಿಂದ ಉಚಿತವಾಗಿ ಬಸ್ ವ್ಯವಸ್ಥೆ ಇರುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪರೀಕ್ಷೆಯು ಭಾನುವಾರ ಬೆಳಿಗ್ಗೆ 10 ರಿಂದ 11.30 ರವರಿಗೆ ಹಾಗೂ 11.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಎರಡು ವಿಭಾಗದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಪರೀಕ್ಷೆಯಲ್ಲಿ ಪಾಲ್ಗೊಂಡು ಅತ್ಯಧಿಕ ಅಂಕಗಳನ್ನು ಪಡೆದ ಆಯ್ದ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಶೇಕಡಾ 50 ವಿದ್ಯಾರ್ಥಿವೇತನ ಪಡೆಯಲಿದ್ದಾರೆ. KCET, NEET, JEE ತರಬೇತಿ ಒಳಗೊಂಡು ಪರೀಕ್ಷೆಯ ನೋಂದಣಿ ಉಚಿತವಾಗಿರುತ್ತದೆ. ಜನವರಿ 8 ರ ಒಳಗಾಗಿ ಸ್ಕ್ಯಾನರ್ ಇಲ್ಲವೇ ಮೊ.ಸಂ-9731338083, 9901317067 ಹಾಗೂ 6363872009 ನಂಬರ್ ನ ವಾಟ್ಸಾಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಟೈಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸುನೀಲ್, ಆಡಳಿತ ಅಧಿಕಾರಿ ಸಂಜಯ್ ಹಾಗೂ ಶೈಕ್ಷಣಿಕ ಮುಖ್ಯಸ್ಥ ಶ್ರೀಕಂಠ ಇದ್ದರು.

Times Education Institute Secretary B.K. Gangadhar said that the organization has organized the Times Olympiad exam on Sunday, January 11, with the aim of providing scholarships to talented students of Channarayapatna taluk.