ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪಷ್ಟನೆ ಬೇಕು: ಕಿಚ್ಚ ಸುದೀಪ್‌ ಮುಂದೆ ವೀಕ್ಷಕರ ಪ್ರಶ್ನೆಗಳ ಮಳೆ

ಬೆಂಗಳೂರು: ಮಾರ್ಕ್‌ ಸಿನಿಮಾ ಪ್ರಚಾರದ ಹಿನ್ನೆಲೆಯಲ್ಲಿ ಕಳೆದ ವಾರ ವೀಕೆಂಡ್‌ ಎಪಿಸೋಡ್‌ ನಡೆಸದ ಕಿಚ್ಚ ಸುದೀಪ್‌, ಈ ವಾರ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಹಲವು ವಿವಾದಗಳ ಬಗ್ಗೆ ಸ್ಪಷ್ಟ ಚರ್ಚೆ ನಡೆಸಬೇಕು ಎಂಬ ಒತ್ತಾಯ ವೀಕ್ಷಕರಿಂದ ಕೇಳಿಬರುತ್ತಿದೆ. ಕಲರ್ಸ್‌ ಕನ್ನಡ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರು ಎತ್ತಿರುವ ಪ್ರಮುಖ ಪ್ರಶ್ನೆಗಳು ಹೀಗಿವೆ:
ಸ್ಪರ್ಧಿಗಳ ಕುಟುಂಬದವರು 6 ಮತಗಳನ್ನು ಗಿಲ್ಲಿಗೆ ನೀಡಿದ್ದರೂ, ಅಶ್ವಿನಿಯ ಜೊತೆ ಸ್ಪರ್ಧೆ ಹಾಗೂ ಟಾಸ್ಕ್ ನೀಡಿದ ನಿರ್ಧಾರದ ಹಿಂದಿನ ಕಾರಣವೇನು?
ಗಿಲ್ಲಿಗೆ ಸ್ವತಂತ್ರ ಕ್ಯಾಪ್ಟನ್ಸಿ ನೀಡದೇ ತಡೆದಿದ್ದು ಯಾಕೆ?
ಟಾಸ್ಕ್‌ನಲ್ಲಿ ಗೆದ್ದ ಗಿಲ್ಲಿಯನ್ನು ಬದಿಗಿಟ್ಟು, “ರಾಣಿ” ನೆಪದಲ್ಲಿ ಅಶ್ವಿನಿಯನ್ನು ಪರೋಕ್ಷವಾಗಿ ಕ್ಯಾಪ್ಟನ್ ಮಾಡಿರುವುದು ನ್ಯಾಯವೇ?
ಇತ್ತೀಚೆಗೆ ಅಶ್ವಿನಿ–ಧ್ರುವಂತ್‌ ಅವರ ಮಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದುರಹಂಕಾರ ಮತ್ತು ಗಿಲ್ಲಿಯನ್ನು ನಿರಂತರವಾಗಿ ಟಾರ್ಗೆಟ್ ಮಾಡುತ್ತಿರುವ ನಡವಳಿಕೆ ಯಾಕೆ?
ಕೆಲಸ ನಿಭಾಯಿಸಲು ವಿಫಲವಾಗಿ ನೆಪ ಹೇಳಿಕೊಂಡ ಅಶ್ವಿನಿ, ಗಿಲ್ಲಿಯ ಜೊತೆ ಜಗಳವಾಡಿ ದ್ವಂದ್ವ ನೀತಿ ತೋರಿಸಿರುವುದಕ್ಕೆ ಸ್ಪಷ್ಟನೆ ಬೇಕು.
ಹಿಂದಿನ ವಾರ ಎಲಿಮಿನೇಷನ್‌ಗೆ ಆಯ್ಕೆಯಾಗಿದ್ದ ಎಲ್ಲಾ ಸ್ಪರ್ಧಿಗಳ ಮತಗಳ ವಿವರವನ್ನು ಬಹಿರಂಗಪಡಿಸಬೇಕು. ಹೊರಹೋಗಿದ ಸ್ಪರ್ಧಿಯ ಅಸಮಾಧಾನಕ್ಕೆ ಉತ್ತರ ಬೇಕು.
ರಾಶಿಕಾಗೆ ‘ಕಿಚ್ಚನ ಚಪ್ಪಾಳೆ’ ಕೊಡಬೇಕೆಂಬ ಒತ್ತಾಯ. ಗಿಲ್ಲಿಗೆ ಆಟದಲ್ಲಿ ಮೋಸ, ಫೇವರಿಸಂ ಆರೋಪ, ಅಶ್ವಿನಿಯ ಅತಿರೇಕದ ವರ್ತನೆ ಬಗ್ಗೆ ಚರ್ಚೆ ಅಗತ್ಯ.
ಅಶ್ವಿನಿಯ ಕೆಳಮಟ್ಟದ ಭಾಷೆ, ಬಾಡಿ ಶೇಮಿಂಗ್‌ ಮಾತುಗಳು (ಮುದುಕಿ, ವಿಗ್‌, ಹಲ್ಲು ಸೆಟ್‌ ಮುಂತಾದ ಪದಗಳು) ಸಹಿಸಬಹುದೇ?
Druvanth ಮತ್ತು ರಕ್ಷಿತಾ ಅವರ ನಿಯಮ ಉಲ್ಲಂಘನೆ, ಅತಿರೇಕದ ನಡವಳಿಕೆಗಳ ಬಗ್ಗೆ ಕಠಿಣ ಪ್ರಶ್ನೆ ಬೇಕು.
ಧನುಷ್‌, ಕಾವ್ಯ ಶೈವ, ರಾಶಿಕಾ, ಧ್ರುವಂತ್‌, ಅಶ್ವಿನಿ ಸೇರಿ ರಕ್ಷಿತಾರ ಮೇಲೆ ನಡೆಯುತ್ತಿರುವ ‘ರ್ಯಾಗಿಂಗ್‌’ ಆರೋಪದ ಕುರಿತು ಕಿಚ್ಚ ಸುದೀಪ್‌ ಎಚ್ಚರಿಕೆ ನೀಡಬೇಕು ಎಂಬ ಅಭಿಪ್ರಾಯ.
ನಾಮಿನೇಷನ್‌ ಬಗ್ಗೆ ಚರ್ಚೆ ಮಾಡಬಾರದೆಂದು ಎಚ್ಚರಿಕೆ ನೀಡಿದರೂ ಧ್ರುವಂತ್‌–ಅಶ್ವಿನಿ ಅದನ್ನೇ ಮುಂದುವರಿಸಿದ್ದು ನಿಯಮ ಉಲ್ಲಂಘನೆಯಲ್ಲವೇ?
ಗಿಲ್ಲಿ ಯಾವತ್ತೂ ಕಾವ್ಯ ಶೈವ ಅವರನ್ನು ನಾಮಿನೇಟ್ ಮಾಡದಿರುವುದು, ಸ್ಪಂದನಾಳನ್ನು ಕಾವ್ಯ ನಾಮಿನೇಟ್ ಮಾಡದಿರುವುದರ ಹಿಂದೆ ಕಾರಣವೇನು?
ಮನೆಯೊಳಗೆ ಕಾವ್ಯ ಶೈವಳ ಪಾತ್ರ ಮತ್ತು ಕೊಡುಗೆ ಏನು? ಗಿಲ್ಲಿಯ ಫೇವರಿಸಂ ಆರೋಪಕ್ಕೆ ಉತ್ತರ ಬೇಕು.
ಕಾಮಿಡಿ ನೆಪದಲ್ಲಿ ರಕ್ಷಿತಾಳನ್ನು ಪದೇಪದೇ ಹಂಗಿಸುವುದು ಸಮಂಜಸವೇ?
ಹೊರಗಿನ ಮಾಹಿತಿ ಪಡೆದ ನಂತರವೂ ಕಾವ್ಯ ಉಳಿದಿರುವುದರ ಬಗ್ಗೆ, ಮನೆಯವರ ಹಸ್ತಕ್ಷೇಪದ ಬಗ್ಗೆ ಸ್ಪಷ್ಟನೆ ಅಗತ್ಯ.
ಧ್ರುವಂತ್‌ ಪರ್ಸನಲ್ ವಿಚಾರಗಳನ್ನು ಹೀಯಾಳಿಸಿ ಮಾತನಾಡಿರುವುದರ ಬಗ್ಗೆ ಕ್ರಮ ಏನು?
ಗಿಲ್ಲಿ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳಲು ಸಿದ್ಧರಾಗಿದ್ದಾರಾ? ಸುದೀಪ್‌ ಬೈತಾರೆ ಎಂಬ ಭಯ ಗಿಲ್ಲಿಯಲ್ಲಿ ಇದೆಯೇ?
“ಹಣೆಬರಹ ಸರಿ ಇಲ್ಲ” ಎಂದು ಗಿಲ್ಲಿ ಬೇಸರ ವ್ಯಕ್ತಪಡಿಸಿರುವುದರ ಹಿನ್ನೆಲೆ ಏನು?