ಸಕಲೇಶಪುರ : ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಮಗು ಸಾ*

ಸಕಲೇಶಪುರ :ಕಾಫಿ ಪಲ್ಪರ್ ಟ್ಯಾಂಕ್ ಗೆ ಆಕಸ್ಮಿಕವಾಗಿ ಮಗುವೊಂದು ಬಿದ್ದು ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಹಾಲೆ ಬೇಲೂರು ಗ್ರಾಮದಲ್ಲಿ ನಡೆದಿದೆ.

ಮೌರ್ಯ (6) ಮೃತ ಪಟ್ಟ ದುರ್ದೈವಿ, ಗ್ರಾಮದ ತಿಲಕ್ ಹಾಗೂ ವಂದಿತಾ ಎಂಬುವರ ಪುತ್ರ, ಗ್ರಾಮದಲ್ಲಿರುವ ತಮ್ಮ ಮನೆಯ ಮುಂಭಾಗದಲ್ಲಿರುವ ಕಾಫಿ ಕಣದಲ್ಲಿ ಬುಧವಾರ ಮದ್ಯಾಹ್ನ ಸುಮಾರು 12.30 ರ ವೇಳೆಯಲ್ಲಿ ಆಟ ಆಡುತಿತ್ತು.

ಈ ಸಂದರ್ಭದಲ್ಲಿ ಮಗು ಕಾಫಿ ಕಣದ ಸಮೀಪದಲ್ಲೇ ಇರುವ ನೀರಿನ ತೊಟ್ಟಿಯೊಳಗೆ ಮಗು ಬಿದ್ದಿರುತ್ತದೆ. ಮಗು ನೀರಿನ ತೊಟ್ಟಿಯಲ್ಲಿ ಬಿದ್ದಿರುವ ವಿಷಯ ತಿಳಿಯದೆ ಗ್ರಾಮದ ಹಲವೆಡೆ ಮಗುವನ್ನು ಹುಡುಕಿದ್ದಾರೆ.

ಎಲ್ಲೆಡೆ ಹುಡುಕಿ ಮಗು ದೊರಕದೆ ಕೊನೆಗೆ ಅನುಮಾನ ಬಂದು ತೊಟ್ಟಿಯ ನೀರನ್ನು ಖಾಲಿ ಮಾಡಿದಾಗ ಮಗುವಿನ ಶವ ಪತ್ತೆಯಾಗಿದೆ. ಪಟ್ಟಣದ ಕ್ರಾಪರ್ಡ್ ಆಸ್ಪತ್ರೆಯಲ್ಲಿ ಮಗುವಿನ ಶವ ಪರೀಕ್ಷೆ ನಡೆಯಿತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.