ಚನ್ನರಾಯಪಟ್ಟಣ: ಮೂಕಿಕೆರೆ ಸರ್ಕಾರಿ ಶಾಲೆಗೆ ₹1.20 ಲಕ್ಷ ಮೌಲ್ಯದ ಸ್ಮಾರ್ಟ್ ಕ್ಲಾಸ್ ಪರಿಕರ ದೇಣಿಗೆ

Menda Foundation Manager V.S. Sadashiva said that organizations and well-to-do people should come forward to strengthen government schools by providing more cooperation with necessary facilities.

ಚನ್ನರಾಯಪಟ್ಟಣ: ಸಂಘ-ಸಂಸ್ಥೆಗಳು ಹಾಗೂ ಉಳ್ಳವರು ಅಗತ್ಯ ಸೌಲಭ್ಯಗಳೊಂದಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕು ಎಂದು ಮೆಂಡ ಫೌಂಡೇಷನ್ ವ್ಯವಸ್ಥಾಪಕ ವಿ.ಎಸ್. ಸದಾಶಿವ ಹೇಳಿದರು.

ತಾಲ್ಲೂಕಿನ ಮೂಕಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಮೆಂಡ ಫೌಂಡೇಷನ್ ಹಾಗೂ ಸೆಲ್ಕೋ ಸೊಲಾರ್ ಕಂಪನಿ ವತಿಯಿಂದ 1.20 ಲಕ್ಷ ರೂ. ಮೌಲ್ಯದ ಸ್ಮಾರ್ಟ್ ಕ್ಲಾಸ್ ಪರಿಕರಗಳನ್ನು ಶಾಲೆಗೆ ಉಚಿತವಾಗಿ ನೀಡಿ ಮಾತನಾಡಿದರು.

ಆಧುನಿಕ ತಂತ್ರಜ್ಞಾನ ಪರಿಕರಗಳನ್ನು ಕಲ್ಪಿಸುವ ಮೂಲಕ ಸರ್ಕಾರಿ ಶಾಲೆಗಳ ಶೈಕ್ಷಣಿಕ ವ್ಯವಸ್ಥೆಯ ಬಲವರ್ಧನೆ ಮಾಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು ಅನೇಕ ಸರ್ಕಾರಿ ಶಾಲೆಗಳಿಗೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷೆ ಮಣಿ ಮಾತನಾಡಿ, ಹಾಜರಾತಿ ಕೊರತೆ ಸೇರಿದಂತೆ ಇತರೆ ಕಾರಣಗಳಿಂದ ನೂರಾರು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ಹಿರಿಯ ವಿದ್ಯಾರ್ಥಿಗಳು ಸಂಘ ಸ್ಥಾಪನೆ ಮಾಡಿಕೊಂಡು ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಂಘಟನೆ ಮಾಡಬೇಕು ಎಂದರು.

ಮುಖ್ಯ ಶಿಕ್ಷಕ ಜೆ.ಹೆಚ್. ಶ್ರೀಕಾಂತ್, ಸಹ ಶಿಕ್ಷಕರಾದ ಕೆಂಪೇಗೌಡ, ಸೌಮ್ಯ, ಕುಮಾರ್, ರಮ್ಯ, ಮೆಂಡ ಫೌಂಡೇಶನ್ ಸಿಬ್ಬಂದಿ, ಎಸ್ ಡಿ ಎಂ ಸಿ ಸದಸ್ಯರು ಹಾಗೂ ಪಾಲಕರು ಹಾಜರಿದ್ದರು.

ಶಿಕ್ಷಣಾಧಿಕಾರಿ ಹೆಚ್.ಎನ್. ದೀಪಾ, ಸಮನ್ವಯಧಿಕಾರಿ ಅನಿಲ್, ಶಿಕ್ಷಣ ಸಂಯೋಜಕ ಶ್ರೀನಿವಾಸ್ ಹಾಗೂ ಸಿ ಆರ್ ಪಿ ಮಂಜುನಾಥ್ ಅವರು ಇಲಾಖೆಯ ಪರವಾಗಿ ಮೆಂಡ ಫೌಂಡೇಶನ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ತಿಳಿಸಿದರು.

Menda Foundation Manager V.S. Sadashiva said that organizations and well-to-do people should come forward to strengthen government schools by providing more cooperation with necessary facilities.