ಹಾಸನ: ಹೊಳೆನರಸೀಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ. ಗುರುರಾಜು ಅವರು ಅರ್ಥಶಾಸ್ತ್ರ ವಿಷಯದಲ್ಲಿ ಮಂಡಿಸಿದ Environmental Impact on Cardamom Growers in Hassan District ಮಹಾಪ್ರಬಂಧಕ್ಕೆ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ ಎಂದು ವಿಶ್ವವಿದ್ಯಾನಿಲಯ ಪ್ರಕಟಣೆ ತಿಳಿಸಿದೆ.
ಕೆ. ಗುರುರಾಜು ಅವರು ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಆರ್.ವೈ. ಖಾನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸಿದ್ದರು. ಅದನ್ನೀಗ ವಿಶ್ವ ವಿದ್ಯಾಲಯ ಮಾನ್ಯ ಮಾಡಿದೆ.
Dravidian University has conferred the Ph.D. degree to K. Gururaju for his thesis titled Environmental Impact on Cardamom Growers in Hassan District in the field of Economics, a university release said.










