ಹಾಸನ: ಕರ್ನಾಟಕ ಮಾದರ ಮಹಾಸಭಾ ಸಂಘಕ್ಕೆ ನೂತನ ಸದಸ್ಯತ್ವ ನೋಂದಣಿ ಹಾಗೂ ತಾಲೂಕು-ಜಿಲ್ಲಾ ಘಟಕಗಳ ರಚನಾ ಸಭೆ, ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ಎಂ.ಆರ್. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ, ಸರ್ವ ಮುಖಂಖಡರ ಸಮ್ಮುಖುದಲ್ಲಿ ಯಶಸ್ವಿಯಾಗಿ ನಡೆಯಿತು.
ನಗರದ ಸ್ವಾಭಿಮಾನಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಹಾಗೂ ಸಮಿತಿ ರಚನೆ ಸಭೆಯಲ್ಲಿ ಮಾತನಾಡಿದ ಎಂ.ಆರ್. ವೆಂಕಟೇಶ್, ಇಡೀ ರಾಜ್ಯದಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದು ಮಾದಿಗ ಸಮುದಾಯ.
ಆ ನಿಟ್ಟಿನಲ್ಲಿ ಈ ಸಮುದಾಯವನ್ನು ವ್ಯವಸ್ಥಿತವಾಗಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ನಮ್ಮ ಸಮುದಾಯದ ರಾಜ್ಯ ನಾಯಕರಾದ ಕೆ.ಹೆಚ್.ಮುನಿಯಪ್ಪ, ನಾರಾಯಣ ಸ್ವಾಮಿ, ಆಂಜನೇಯ, ಗೋವಿಂದ ಕಾರಜೋಳ ಮೊದಲಾದವರು ಪಕ್ಷಾತೀತವಾಗಿ ಕರ್ನಾಟಕ ಮಾದರ ಮಹಾಸಭಾ ರಚಿಸಿದ್ದಾರೆ ಎಂದರು.
ಈ ಮೂಲಕ ಸಮುದಾಯ ಕಟ್ಟುವ ಕೆಲಸಕ್ಕೆ ಮುಂದಾಗಿದ್ದು, ಸಮುದಾಯದ ಬಂಧುಗಳು ಒಕ್ಕೊರಲಿನಿಂದ ಸದಸ್ಯರಾಗಿ ಸಭಾವನ್ನು ಸದೃಢವನ್ನಾಗಿ ಮಾಡೋಣ ಎಂದು ಮನವಿ ಮಾಡಿದರು.
ಸದಸ್ಯತ್ವ ನೋಂದಣಿ ಸಂಪೂರ್ಣ ಆನ್ ಲೈನ್ನಲ್ಲಿ ನಡೆಯಲಿದ್ದು, ಆ ಮೂಲಕ ಸದಸ್ಯತ್ವ ಮಾಡಿಕೊಳ್ಳಬೇಕು, ಬೇರೆಯಾರಿಗೂ ಹಣ ನೀಡಿ ಮೋಸ ಹೋಗಬಾರದು, ಆನ್ ಲೈನ್ ನಲ್ಲಿ ನೋಂದಣಿಯಾಗಿ ಹಣ ಪಾವತಿ ಮಾಡಿದ ತಕ್ಷಣವೇ ಐಡಿ ಕಾರ್ಡ್ ಬರಲಿದ್ದು, ಅಲ್ಲಿಯೇ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿದ್ದವರು ಸೂಕ್ತ ಸಲಹೆ ಸೂಚನೆ ನೀಡಿದರು. ಹಾಗೂ ತಾಲೂಕು-ಜಿಲ್ಲಾಮಟ್ಟಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನೋಂದಣಿ ಅಭಿಯಾನ ವನ್ನು ರಾಜ್ಯ ಸಮಿತಿ ಸೂಚಿಸಿದಂತೆ ಸ್ಥಳದಲ್ಲೇ 500ಕ್ಕೂ ಸದಸ್ಯರು ನೋಂದಣಿ ಪಡೆದರು.
ಮಹಾಸಭಾದ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಜಿಲ್ಲಾ-ತಾಲೂಕು ಮಟ್ಟದ ಸಮಿತಿ ರಚನೆಯಾಗಿದ್ದು, ಒಂದು ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ಸಾವಿರದಂತೆ ನೋಂದಣಿ ಮಾಡಿಸಬೇಕು. ಸಮುದಾಯದ 1 ಕುಟುಂಬಕ್ಕೆ ಒಬ್ಬರಂತೆ 500 ರೂ. ನೀಡಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಮಾದಾರ ಮಹಾಸಭಾವು ಅನೇಕ ಧೈಯೋದ್ದೇಶ ಹೊಂದಿದ್ದು, ಸಮುದಾಯದ ಪರವಾಗಿ ಅದರಲ್ಲೂ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಮುಖ್ಯವಾಗಿ ಶ್ರಮಿಸಲಿದ್ದು, ಯುವ ಪೀಳಿಗೆಯನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ, ಸದೃಢ ಸಮಾಜ ಕಟ್ಟುವ ಕೆಲಸವನ್ನು ಜಿಲ್ಲೆಯಲ್ಲಿ ರಾಜ್ಯ ನಾಯಕರ ನಿರ್ದೇಶನದಂತೆ ಮಾಡಬೇಕು ಎಂದರು.
ಮಾದರ ಮಹಾಸಭಾ ಪಾರದರ್ಶಕವಾಗಿ ಕೆಲಸ ಮಾಡಲಿದ್ದು, ಸಂಘದ ಆರ್ಥಿಕ ಕಾರ್ಯಗಳು ಸೇರಿದಂತೆ ಎಲ್ಲ ಕಾರ್ಯಗಳು ಆನ್ ಲೈನ್ ನಲ್ಲಿ ವೆಬ್ ಸೈಟ್ನಲ್ಲಿ ಲಭ್ಯವಿದ್ದು, ಸರ್ವರೂ ವೀಕ್ಷಣೆ ಮಾಡಬಹುದು ಹಾಗೂ ಏನಾದರೂ ಗೊಂದಲಗಳಿದ್ದರೆ ಅಥವಾ ಆಕ್ಷೇಪಣೆಗಳಿದ್ದರೆ ನೇರವಾಗಿ ಸಂಪರ್ಕಿಸಿ ಪರಿಹರಿಸಕೊಳ್ಳಬಹುದು. ವಿದ್ಯಾರ್ಥಿಗಳು, ಯುವ ಮಿತ್ರರು ಸಂಘಟನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ದೇವರಾಜ್, ಆಲೂರು ಹೇಮಂತ್, ಕೆಡಿಎಸ್ಎಸ್ ಜಿಲ್ಲಾ ಸಂಚಾಲಕ ವಿರೂಪಾಕ್ಷಿಪುರ ಪ್ರಕಾಶ್, ಸಫಾಯಿ ಕರ್ಮಾಚಾರ ಆಯೋಗದ ಜಿಲ್ಲಾ ಉಸ್ತುವಾರಿ ಶ್ರೀನಿವಾಸ್ ಚನ್ನರಾಯಪಟ್ಟಣ, ಬೈರೇಶ್, ಕುಮಾರಸ್ವಾಮಿ ದೊಡ್ಡಪುರ, ಮಹಿಳಾ ಮುಖಂಡರಾದ ವಸಂತಮ್ಮ, ತಾಪಂ ಮಾಜಿ ಸದಸ್ಯ ಶೇಖರಪ್ಪ ಬೇಲೂರು, ರಂಗಸ್ವಾಮಿ, ಜೇನುಕಲ್ ಉಂಡಿಗನಾಳು, ವೀರಭದ್ರಪ್ಪ, ಗೋಪಿ ಹೊಸೂರು, ಪ್ರದೀಪ್ ಅರಕೆರೆ, ರಂಗಸ್ವಾಮಿ, ಧನಂಜಯ ಕರಗುಂದ, ಕಲಾವಿದ ಮಹೇಶ್ ಇದ್ದರು. ಮುಖಂಡ ಬೈರೇಶ್ ಸ್ವಾಗತಿಸಿದರು.
The meeting for registration of new membership and formation of taluk-district units of Karnataka Madara Mahasabha Sangha was successfully held under the chairmanship of State Committee Member and District In-charge M.R. Venkatesh in the presence of all the dignitaries.










