ಹಾಸನ: ದೇಶದ ಸಂಸ್ಕೃತಿ, ಕಲೆ ಮತ್ತು ಪರಂಪರೆಗೆ ಅಪಾರ ಕೊಡುಗೆ ನೀಡಿದ ಮಹಾನ್ ಶಿಲ್ಪಿ, ವಿಶ್ವವಿಖ್ಯಾತ ಶಿಲ್ಪಕಲಾವಿದ ರಾಮ್ ವಿ. ಸುತಾರ್ ಅವರ ನಿಧನಕ್ಕೆ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ಅಗಲಿಕೆ ದೇಶದ ಶಿಲ್ಪಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ದೇಶದ ಸಂಸ್ಕೃತಿ ಮತ್ತು ಪರಂಪರೆಗೆ ಅಮೂಲ್ಯ ಕೊಡುಗೆ ನೀಡಿದ ಮಹಾನ್ ಶಿಲ್ಪಿ, ಜಗತ್ತಿನ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲರ “ಸ್ಟ್ಯಾಚ್ಯೂ ಆಫ್ ಯುನಿಟಿ”, ನವದೆಹಲಿಯ ಸಂಸತ್ ಭವನದಲ್ಲಿನ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಇತ್ತೀಚೆಗೆ ಗೋವಾದಲ್ಲಿ ನಿರ್ಮಿತ ಪ್ರಭು ಶ್ರೀರಾಮನ ಭವ್ಯ ಪ್ರತಿಮೆ ಸೇರಿದಂತೆ ನೂರಾರು ಶಿಲ್ಪಕೃತಿಗಳ ಶಿಲ್ಪಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ವಿ. ಸುತಾರ್ ಅವರು ವಿಶ್ವಕರ್ಮ ಸಾಯುಜ್ಯ ಹೊಂದಿದ್ದಾರೆ.
ಅವರ ಅಗಲಿಕೆ ದೇಶದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹರೀಶ್ ಸಂತಾಪ ವ್ಯಕ್ತಪಡಿಸಿದ್ದಾರೆ.
District Vishwakarma Samaj President H. V. Harish has expressed deep condolences on the demise of world-renowned sculptor Ram V. Sutar, a great sculptor who made immense contributions to the country’s culture, art and heritage.










