ಬೆಂಗಳೂರು: ಹೊಸ ವರ್ಷಾಚರಣೆ – ಪಬ್, ಬಾರ್, ಕ್ಲಬ್‌ಗಳಿಗೆ ಪೊಲೀಸ್ ಮಾರ್ಗಸೂಚಿ

There are only a few days left for the arrival of the new calendar year 2026. Major cities including Bangalore are gearing up to welcome the new year. The Greater Bengaluru Authority and the Police Department are taking action.

ಬೆಂಗಳೂರು: ಹೊಸ ಹೊಸ ಕ್ಯಾಲೆಂಡರ್ ವರ್ಷ 2026ರ ಆಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವುದು. ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು ಸಜ್ಜಾಗುತ್ತಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೂಕ್ತ ನಿಗಾವಹಿಸಲು ಕ್ರಮ ಕೈಗೊಳ್ಳುತ್ತಿವೆ.

ಹೊಸ ವರ್ಷ ಆಚರಣೆ ವೇಳೆ ಯಾವುದೇ ಅವಘಡ, ದುರಂತ ಸಂಭವಿಸದಂತೆ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಂಗಳೂರಿನ ಪಬ್, ಬಾರ್, ಕ್ಲಬ್​ಗಳಿಗೆ ಕೆಲವು ಸಲಹೆಗಳನ್ನು ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿವೆ.

ಹೊಸ ವರ್ಷಾಚರಣೆ ಸಮಯದಲ್ಲಿ ಪಬ್, ಕ್ಲಬ್ ಗಳಲ್ಲಿ ಧ್ವನಿವರ್ಧಕದ ಸೌಂಡ್ ಎಷ್ಟಿರಬೇಕು, ಯಾವ ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಬೇಕು? ಎಲ್ಇಡಿ ಸ್ಕ್ರೀನ್ ಹಾಗೂ ಸುರಕ್ಷಿತಾ ಮಾನದಂಡಗಳ ಕುರಿತು ಸಲಹೆ ಸೂಚನೆ ನೀಡಲಾಗಿದೆ. ಜೊತೆಗೆ ಸರ್ಕಾರದಿಂದಲೂ ಪಬ್, ಬಾರ್, ಕ್ಲಬ್​ಗಳಿಗೆ ನೋಟಿಸ್ ನೀಡಲಾಗಿದೆ. ಎಂಜಿ ರಸ್ತೆ , ಚರ್ಚ್ ಸ್ಟ್ರೀಟ್ ರೋಡ್ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಸಂಭ್ರಮಾಚರಣೆ ನಡೆಯುವ ರಸ್ತೆಗಳ ನೆಲಮಹಡಿ, ಅಂಡರ್ ಪಾಸ್ ಬಂದ್ ಮಾಡಲಾಗುತ್ತದೆ.